ರಾಘವೇಶ್ವರ ಶ್ರೀ ಅನ್ನಬ್ರಹ್ಮ ಚಾತುರ್ಮಾಸ್ಯ: ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಸಮರ್ಪಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಗೋಕರ್ಣದ ಅಶೋಕೆಯಲ್ಲಿರುವ ಶ್ರೀರಾಮಚಂದ್ರಾಪುರ ಮೂಲ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಅನ್ನಬ್ರಹ್ಮ ಚಾತುರ್ಮಾಸ್ಯದ ಸಂದರ್ಭ ಶನಿವಾರ ಹಾಲಕ್ಕಿ ಸಮಾಜದವರಿಂದ ಸ್ವರ್ಣ ಪಾದುಕಾ ಪೂಜೆ ನೆರವೇರಿತು. ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ಹಾಲಕ್ಕಿ ಸಮಾಜದವರು ಸಮರ್ಪಿಸಿದ ಸ್ವರ್ಣಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಹಾಲಕ್ಕಿ ಸಮಾಜದವರು ಶ್ರೀಮಠದ ಕೆಕ್ಕಾರು ಶಾಖಾ ಮಠಕ್ಕೆ ಪರಂಪರೆಯಿಂದ ತಮ್ಮ ಶ್ರದ್ಧಾಭಕ್ತಿಗಳನ್ನು ಸಲ್ಲಿಸುತ್ತಾ ಬಂದಿದ್ದು. ಅದರಲ್ಲಿ ತಮ್ಮ ಹಿತವನ್ನು ಕಂಡಿದ್ದಾರೆ. ಹಾಲಕ್ಕಿ ಸಮಾಜದ ಜೊತೆ ಶ್ರೀಮಠ ಸದಾ … Continue reading ರಾಘವೇಶ್ವರ ಶ್ರೀ ಅನ್ನಬ್ರಹ್ಮ ಚಾತುರ್ಮಾಸ್ಯ: ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಸಮರ್ಪಣೆ