Sunday, October 19, 2025

ಪ್ರಯಾಗ್ ರಾಜ್ ವ್ಯಕ್ತಿಗೆ ಸಂಕಷ್ಟ ತಂದಿಟ್ಟ ರಾಹುಲ್ ಗಾಂಧಿ: ಅಂತದ್ದು ಏನು ಮಾಡಿದ್ರು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಎಡವಟ್ಟಿನಿಂದಾಗಿ ಪ್ರಯಾಗ್‌ರಾಜ್‌ನ ಮೇಜಾ ನಿವಾಸಿ ಅಂಜನಿ ಮಿಶ್ರಾ ಅವರಿಗೆ ನಿನ್ನೆ ಸಂಜೆಯಿಂದ ನೂರಾರು ಫೋನ್ ಕರೆಗಳು ಬಿಡುವಿಲ್ಲದೆ ಬರುತ್ತಿದೆಯಂತೆ.

ಹೌದು, ರಾಹುಲ್ ಗಾಂಧಿ ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತ ಕಳ್ಳತನ ಆರೋಪಗಳಿಗೆ ಸಂಬಂಧಿಸಿದಂತೆ ಅಂಜನಿ ಮಿಶ್ರಾ ಅವರ ಫೋನ್ ನಂಬರ್ ಹಂಚಿಕೊಂಡಿದ್ದರು.

ಇದರಿಂದಾಗಿ ಮೇಜಾ ತಹಸಿಲ್‌ನ ಮೇಜಾ ರಸ್ತೆಯಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿರುವ ಮಿಶ್ರಾ , ನಿನ್ನೆ ಸಂಜೆಯಿಂದ, ಮತ ಕಳ್ಳತನದ ಬಗ್ಗೆ ಕೇಳಿಕೊಂಡು 300 ಕ್ಕೂ ಹೆಚ್ಚು ಕರೆಗಳು ನನಗೆ ಬಂದಿವೆ. ನನಗಂತೂ ಬೇಜಾರಾಗಿಹೋಗಿದೆ. ನಾನು ಹೋಗಿ ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

ನಾನು ಕಳೆದ 15 ವರ್ಷಗಳಿಂದ ಈ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದೇನೆ. ರಾಹುಲ್ ಗಾಂಧಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನನ್ನ ಸಂಖ್ಯೆಯನ್ನು ಹೇಗೆ ಹಂಚಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ, ಈಗ ಕೆಲಸದ ಮಧ್ಯೆ ಫೋನ್ ಕರೆಗಳು ಬರುತ್ತಿರುವುದರಿಂದ ನನಗೆ ಕಿರಿಕಿರಿಯಾಗುತ್ತಿದೆ, ಸಮಸ್ಯೆಯಾಗುತ್ತಿದೆ ಎಂದು ಮಿಶ್ರಾ ಬೇಸರ ಹೊರಹಾಕಿದರು. ಹೇಳಿದರು.

error: Content is protected !!