Saturday, October 11, 2025

ಕೋವಿಡ್ ವೇಳೆ ಸ್ಥಗಿತವಾಗಿದ್ದ ಬೆಳಗಾವಿ-ಮೀರಜ್ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ರೈಲ್ವೆ ಮಂಡಳಿ ಗ್ರೀನ್‌ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮೀರಜ್ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ವಿಶೇಷ ಏಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲನ್ನು ಪ್ಯಾಸೆಂಜರ್ ರೈಲಾಗಿ ಬದಲಾವಣೆ ಮಾಡಿ ಕೇಂದ್ರ ರೈಲ್ವೆ ಮಂಡಳಿ ಆದೇಶಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ಸಂದರ್ಭದಲ್ಲಿ ಬೆಳಗಾವಿ ಮಿರಜ್ ಪ್ಯಾಸೆಂಜರ್ ರೈಲು ಸಂಚಾರ ನಿಲ್ಲಿಸಲಾಗಿತ್ತು. ಕಳೆದ ಎರಡು ವರ್ಷದಿಂದ ವಿಶೇಷ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ.

ಈಗ ಪ್ರತಿದಿನ ಪ್ಯಾಸೆಂಜರ್ ರೈಲಾಗಿ ಸಂಚರಿಸಲಿದೆ. ಇದರಿಂದ ಟಿಕೆಟ್ ಬೆಲೆ ಕಡಿತಗೊಂಡು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಾಗಿ ಬರುವವರಿಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದ್ದಾರೆ.


error: Content is protected !!