ಉತ್ತರ ಪ್ರದೇಶದಲ್ಲಿ ಮಳೆಯ ‘ರೌದ್ರಾವತಾರ’: ಬಿರುಗಾಳಿ, ಸಿಡಿಲಿನ ಅಬ್ಬರ; 104ಕ್ಕೇರಿದ ಸಾವಿನ ಸಂಖ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದಲ್ಲಿ ಅಕಾಲಿಕ ಮಳೆ ಮತ್ತು ಭಾರೀ ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ, ಸಿಡಿಲು ಮತ್ತು ಗಾಳಿಯ ಅಬ್ಬರಕ್ಕೆ ಈವರೆಗೆ 104 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಮನೆಗಳು ಕುಸಿದಿದ್ದು, ಮರಗಳು ಧರೆಗುರುಳಿ, ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಅತಿಹೆಚ್ಚು 21 ಮಂದಿ ಸಾವನ್ನಪ್ಪಿದ್ದು, ಭದೋಹಿ, ಮಿರ್ಜಾಪುರ, ಫತೇಪುರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ ದೊಡ್ಡ ಪ್ರಮಾಣದಲ್ಲಿ … Continue reading ಉತ್ತರ ಪ್ರದೇಶದಲ್ಲಿ ಮಳೆಯ ‘ರೌದ್ರಾವತಾರ’: ಬಿರುಗಾಳಿ, ಸಿಡಿಲಿನ ಅಬ್ಬರ; 104ಕ್ಕೇರಿದ ಸಾವಿನ ಸಂಖ್ಯೆ