May 14, 2026
Thursday, May 14, 2026
spot_img

ಉತ್ತರ ಪ್ರದೇಶದಲ್ಲಿ ಮಳೆಯ ‘ರೌದ್ರಾವತಾರ’: ಬಿರುಗಾಳಿ, ಸಿಡಿಲಿನ ಅಬ್ಬರ; 104ಕ್ಕೇರಿದ ಸಾವಿನ ಸಂಖ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಅಕಾಲಿಕ ಮಳೆ ಮತ್ತು ಭಾರೀ ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ, ಸಿಡಿಲು ಮತ್ತು ಗಾಳಿಯ ಅಬ್ಬರಕ್ಕೆ ಈವರೆಗೆ 104 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಮನೆಗಳು ಕುಸಿದಿದ್ದು, ಮರಗಳು ಧರೆಗುರುಳಿ, ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಅತಿಹೆಚ್ಚು 21 ಮಂದಿ ಸಾವನ್ನಪ್ಪಿದ್ದು, ಭದೋಹಿ, ಮಿರ್ಜಾಪುರ, ಫತೇಪುರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ ದೊಡ್ಡ ಪ್ರಮಾಣದಲ್ಲಿ ವರದಿಯಾಗಿದೆ. ಒಟ್ಟು 53 ಮಂದಿ ಗಾಯಗೊಂಡಿದ್ದು, ಸುಮಾರು 98 ಮನೆಗಳು ಹಾನಿಗೊಂಡಿವೆ. ಜತೆಗೆ 130ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಬಿರುಗಾಳಿಯ ತೀವ್ರತೆಗೆ ಹಲವೆಡೆ ಟಿನ್‌ ಶೆಡ್‌ಗಳು ಮತ್ತು ಜಾಹೀರಾತು ಫಲಕಗಳು ನೆಲಕ್ಕುರುಳಿವೆ. ಮರಗಳು ರಸ್ತೆಗಳ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಜನರು ಫ್ಲೈಓವರ್ ಕೆಳಗೆ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭದೋಹಿ ಮತ್ತು ಮಿರ್ಜಾಪುರ ಭಾಗಗಳಲ್ಲಿ ಪಾಂಟೂನ್ ಸೇತುವೆಗಳು ಹಾನಿಗೊಂಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, 24 ಗಂಟೆಗಳೊಳಗೆ ಪರಿಹಾರ ಧನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !