Saturday, October 11, 2025

ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಗೆ ರಾಮಲಿಂಗಾರೆಡ್ಡಿ ಅಸಮಾಧಾನ: ಇಷ್ಟಕ್ಕೂ ಆಗಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಬಾರಿ ಬಿಗ್‌ಬಾಸ್ ಶೋಗೆ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಮಾಧ್ಯಮಗಳ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಬಿಗ್‌ಬಾಸ್ ನಿಯಮ ಮೀರಿದ್ದಾರೆ ಅಂತ ನೋಟಿಸ್ ಕೊಟ್ಟಿದ್ದರು. ಅವರು ನೋಟಿಸ್‌ಗೂ ಕ್ಯಾರೆ ಎನ್ನಲಿಲ್ಲ ಅಂತ ಬೀಗ ಹಾಕಿದ್ರು. ಈಗ ನಿನ್ನೆ ಡಿಕೆ ಶಿವಕುಮಾರ್ ಅನುಮತಿ ಕೊಡಿ ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ, ಮುಚ್ಚಿದ ಮೇಲೆ ಅದು ಸರಿ ಆಗೋವರೆಗೂ ತೆಗೆಯೋಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

error: Content is protected !!