Wednesday, October 1, 2025

ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ ವಿಐಪಿ ಟ್ರೀಟ್ಮೆಂಟ್‌ ಇದೆ, ಆದ್ರೆ ದರ್ಶನ್‌ಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಕನಿಷ್ಟ ಸವಲತ್ತು ಕೊಡಬೇಕೆಂದು ಮನವಿ ಮಾಡಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದಿಸಿದರು. ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.

ವಾದ ಮಂಡಿಸಿದ ಸುನಿಲ್ ಕುಮಾರ್, ಕೋರ್ಟ್ ಆದೇಶವನ್ನು ಯಾಕೆ ಪಾಲನೆ ಮಾಡ್ತಾ ಇಲ್ಲ? ಇಡೀ ದೇಶದಲ್ಲಿ ಫಾಲೋಅಪ್ ಮಾಡದೇ ಇರೋದು ದರ್ಶನ್ ಕೇಸ್ ಅಲ್ಲಿ ಏಕೆ? 45 ದಿನದಿಂದ ಕ್ವಾರಂಟೈನ್ ಅಲ್ಲಿ ಇದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿಗೆ ವಿಐಪಿ ಟ್ರಿಟ್ಮೆಂಟ್ ಕೊಡ್ತಾ ಇದ್ದಾರೆ. ಕಲರ್ ಟಿವಿ ನೀಡಿದ್ದಾರೆ. ಆದರೆ, ದರ್ಶನ್‌ಗೆ ಏನನ್ನೂ ಕೊಡ್ತಾ ಇಲ್ಲ, ಯಾವ ಸೌಲಭ್ಯವೂ ಇಲ್ಲ ಎಂದು ಆರೋಪಿಸಿದರು. 

ರೇಪಿಸ್ಟ್ಗೆ ನೀಡುತ್ತಾ ಇರೋ ಸೌಲಭ್ಯವನ್ನೂ ದರ್ಶನ್‌ಗೆ ನೀಡ್ತಿಲ್ಲ. ಇದಕ್ಕೆ ಬೇಕಾದ ದಾಖಲೆ ಕೊಡಬಹುದು. ಉಮೇಶ್ ರೆಡ್ಡಿಗೆ ಎಲ್ಲಾ ಸೌಲಭ್ಯವೂ ಇದೆ. ವಿಐಪಿ ಟ್ರೀಟ್ಮೆಂಟ್ ಅಲ್ಲಿ ಇದ್ದಾನೆ. ಕ್ವಾರಂಟೈನ್ ಅನ್ನೋ ಪದ ಜೈಲ್ ಮ್ಯಾನ್ಯುಯಲ್ ಅಲ್ಲಿ ಇದ್ದರೆ ಅರ್ಜಿ ಹಿಂಪಡೆಯುತ್ತೇನೆ. ಜೈಲ್ ಮ್ಯಾನ್ಯುಯಲ್ ಅಲ್ಲಿ ಒಮ್ಮೆ ಅಲ್ಲ 11 ಕಡೆ ಪದ ಇದೆ. ಕ್ವಾರಂಟೈನ್ ಅಲ್ಲಿ ಇಡೋದು ಜೈಲಾಧಿಕಾರಿಗಳಿಗೆ ಬಿಟ್ಟಿದ್ದು, ಅವರ ಒತ್ತಾಯ ಏನು ಎಂದು ಪ್ರಶ್ನಿಸಿದರು.

ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಜೈಲ್ ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ಕೊಡಲಾಗ್ತಿದೆ. ಕಂಬಳಿ, ಬೆಡ್ ಶೀಟ್, ಚೊಂಬು ತಟ್ಟೆ ಎಲ್ಲವನ್ನೂ ಕೊಡಲಾಗಿದೆ. ಹಾಸಿಗೆಯನ್ನು ಕೊಡಲು ಅವಕಾಶ ಇಲ್ಲ. ಪಲ್ಲಂಗ ಕೊಡಿ ಮಲಗಿಸಬೇಕು ಅಂದ್ರೆ ಆಗೋದಿಲ್ಲ. ವಾಕಿಂಗ್ ಮಾಡೋದಕ್ಕೆ ಅವಕಾಶ ಕೊಡಲಾಗಿದೆ. ಇದೇ ಸೆಲ್‌ನಲ್ಲಿ ಇರಬೇಕು ಅಂತ ಕೇಳೋ ಅಧಿಕಾರ ಆರೋಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.