ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಇದೀಗ ಹಾರರ್ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಇದು ಮಾಮೂಲಿ ಸಿನಿಮಾ ಅಲ್ಲ, ಫೇಮಸ್ ಸಿನಿಮಾದ ಮುಂದುವರಿದ ಭಾಗ! ಯಾವುದು ಅಂತೀರಾ?
ಸಿನಿಮಾ ಕಾಂಚನ-4, ಹೌದು, ಕಾಂಚನ ಸೀಕ್ವೆಲ್‌ನಲ್ಲಿ ನಟಿ ರಶ್ಮಿಕಾ ಆಕ್ಟ್ ಮಾಡಲಿದ್ದಾರೆ. ನೂರು ಕೋಟಿ ಹೀರೋಗಳಾದ ಅಲ್ಲು ಅರ್ಜುನ್, ರಣ್ಬೀರ್ ಕಪೂರ್, ಸಲ್ಮಾನ್ ಖಾನ್ ಜೊತೆ ನಟಿಸಿದ್ದ ರಶ್ಮಿಕಾ ಇದೀಗ ರಾಘವ್ ಲಾರೆನ್ಸ್ ಜೊತೆ ನಟಿಸಲಿದ್ದಾರೆ. ಈ ಮೂಲಕ ಕಥೆ ಚೆನ್ನಾಗಿದ್ರೆ ಹೀರೋ ಯಾರಾದರೂ ಪರವಾಗಿಲ್ಲ ಅನ್ನೋದನ್ನು ರಶ್ಮಿಕಾ ಸಾಬೀತು ಮಾಡಿದ್ದಾರೆ.
ರಾಘವ್ ಹಾರರ್ ಕಾಮಿಡಿ ಮೂಲಕ ಜನರ ಮನಸ್ಸನ್ನು ಗೆದ್ದ ನಟ. ಇವರ ಸಿನಿಮಾಗಳು ಬಾಲಿವುಡ್ ಫೇಮಸ್ ನಟರ ಸಿನಿಮಾಗಳಂತೆ ಆಗದಿದ್ರೂ ಇದಕ್ಕೆ ವಿಭಿನ್ನ ಆಡಿಯನ್ಸ್ ಇದ್ದಾರೆ. ಈ ಹಿಂದೆ ಸಿನಿಮಾಗೆ ಪೂಜಾ ಭಟ್ ನಾಯಕಿ ಎಂದು ಹೇಳಲಾಗಿತ್ತು. ಆದರೆ ಇದೀಗ ರಶ್ಮಿಕಾ ಸಿನಿಮಾ ಕಥೆ ಕೇಳಿ ಫಿದಾ ಆಗಿದ್ದಾರೆ ಎನ್ನಲಾಗಿದೆ.
CINE | ಕಥೆ ಚೆನ್ನಾಗಿದ್ರೆ ಹೀರೋ ಮುಖ್ಯ ಅಲ್ಲ ಅನ್ನೋದನ್ನು ಸಾಬೀತು ಮಾಡಿದ ರಶ್ಮಿಕಾ ಮಂದಣ್ಣ
