ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಖಂದರ್ ಸಿನಿಮಾ ಸೋಲಿನ ನಂತರ ರಶ್ಮಿಕಾ ಮತ್ತೆ ತಾನು ಲಕ್ಕಿ ಚಾರ್ಮ್ ಎಂದು ಪ್ರೂವ್ ಮಾಡಿದ್ದಾರೆ. ಸತತ ಹಿಟ್ ಸಿನಿಮಾಗಳ ನಂತರ ರಶ್ಮಿಕಾ ಸಿಖಂದರ್‌ನಲ್ಲಿ ನಟಿಸಿದ್ದರು. ಆದರೆ ಸಿನಿಮಾ ಫ್ಲಾಪ್ ಆಗಿತ್ತು. ಇದೀಗ ರಶ್ಮಿಕಾ ಅಭಿನಯದ ಥಾಮ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಆಯುಷ್ಮಾನ್ ಖುರಾನಾ ಜೊತೆ ರಶ್ಮಿಕಾ ಮಂದಣ್ಣ ನಟಿಸಿರುವ ಥಾಮ ಐದೇ ದಿನಗಳಲ್ಲಿ ಈ ಚಿತ್ರವು 100 ಕೋಟಿ ರೂ. ಕ್ಲಬ್‌ಗೆ ಸೇರಿದೆ. ಇದು ಮಡೋಕ್ ಫಿಲ್ಮ್ಸ್‌ನ ಹಾರರ್ ಕಾಮಿಡಿ ಸರಣಿಯ ಸಿನಿಮಾವಾಗಿದ್ದು, ಈ ಹಿಂದೆ ಬಂದ ‘ಸ್ತ್ರೀ’, ‘ಭೇಡಿಯಾ’, ‘ಸ್ತ್ರೀ 2’ ಮತ್ತು ‘ಮುಂಜ್ಯಾ’ ಸಿನಿಮಾಗಳು ಗೆದ್ದಿದ್ದವು. ಅದೇ ಸಾಲಿಗೆ ಈಗ ‘ಥಾಮಾ’ ಸೇರಿಕೊಂಡಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 21ರಂಂದು ತೆರೆಕಂಡಿದ್ದ ಈ ಸಿನಿಮಾ ಮೊದಲಿಗೆ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ಆದರೆ ವಾರದ ಮಧ್ಯದಲ್ಲಿ ಕಲೆಕ್ಷನ್ ಸ್ವಲ್ಪ ಕಡಿಮೆಯಾದರೂ, ವೀಕೆಂಡ್‌ನಲ್ಲಿ ಮತ್ತೆ ಚೇತರಿಕೆ ಕಂಡಿದೆ.
ಮೂಲಗಳ ಪ್ರಕಾರ, ಈ ಚಿತ್ರವು 145 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಪ್ರೀ-ರಿಲೀಸ್ ಬ್ಯುಸಿನೆಸ್‌ನಲ್ಲಿಯೇ ಒಂದಷ್ಟು ಆದಾಯವನ್ನು ಈ ಚಿತ್ರ ಪಡೆದುಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ, ಮೊದಲ 10 ದಿನಗಳಲ್ಲಿ ಈ ಚಿತ್ರದ ಗಳಿಕೆ 200 ಕೋಟಿ ರೂ. ದಾಟಲಿದೆ ಎಂಬ ನಿರೀಕ್ಷೆ ಇದೆ. ಅಂದಹಾಗೆ, 2022ರಲ್ಲಿ ತೆರೆಕಂಡಿದ್ದ ವರುಣ್ ಧವನ್ ಮತ್ತು ಕೃತಿ ಸನೋನ್ ಅಭಿನಯದ ‘ಭೇಡಿಯಾ’ ಸಿನಿಮಾದ 95 ಕೋಟಿ ರೂ. ಲೈಫ್ ಟೈಮ್ ಗಳಿಕೆಯನ್ನು ‘ಥಾಮಾ’ ಚಿತ್ರ ಉಡೀಸ್ ಮಾಡಿದೆ. ‘ಮುಂಜ್ಯಾ’ ಸಿನಿಮಾದ 132 ಕೋಟಿ ರೂ. ಗಳಿಕೆಯನ್ನು ಬ್ರೇಕ್ ಮಾಡುವುತ್ತ ರಶ್ಮಿಕಾ ಸಿನಿಮಾ ಮುನ್ನಡೆದಿದೆ.

