Friday, December 12, 2025

ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ….ಕಾಂತಾರದ ಆ ದಿನ ನೆನಪಿಸಿಕೊಂಡ ರಿಷಬ್ ಶೆಟ್ಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್ ಒನ್ ಚಿತ್ರ ಭರ್ಜರಿ ಯಶಸ್ಸಿನ ಬಳಿಕ ಇದೀಗ ರಿಷಬ್ ಶೆಟ್ಟಿ ಶೂಟಿಂಗ್‌ ಕ್ಯಾಂಪ್‌ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾ ಖಾತೆಯಲ್ಲಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡ ರಿಷಬ್ ಅದರ ಹಿನ್ನೆಲೆ ಹಾಗೂ ಪ್ರಾಮುಖ್ಯತೆಯ ಕುರಿತು ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.

`ಕಾಂತಾರ ಚಾಪ್ಟರ್‌-1′ ರಲ್ಲಿ ಬರುವ ಬುಡಕಟ್ಟು ಜನಾಂಗದ ದೃಶ್ಯವಾಗಿದೆ. ಇದು ನನ್ನ ತಂಡಕ್ಕೆ ನಾನು ಕಥೆಯ ಆತ್ಮವನ್ನ ತಿಳಿಸಿದ ಕ್ಷಣ ಎಂದು ವರ್ಣಿಸಿದ್ದಾರೆ.

ರಿಷಬ್ ಹೇಳಿದ್ದೇನು?
ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವ ಪಡೆದಾಗ, ನಮ್ಮ ಕಥೆಯ ಆತ್ಮವನ್ನ ನಾನು ವರ್ಗಾಯಿಸಿದ ಕ್ಷಣ ಇದು. ನಮ್ಮ ಮೊದಲ ಕಾರ್ಯಾಗಾರವು ಕೇವಲ ಪೂರ್ವಾಭ್ಯಾಸವಾಗಿರಲಿಲ್ಲ. ಅದು ಕಲ್ಪನೆಗೆ ಭಾವದ ಉಸಿರು ತುಂಬುವ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲಾ ನಟರ ಬಗ್ಗೆ ನನಗೆ ಪ್ರೀತಿ ಇದೆ ಎಂದು ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://x.com/shetty_rishab/status/1999373659304321187?ref_src=twsrc%5Etfw%7Ctwcamp%5Etweetembed%7Ctwterm%5E1999373659304321187%7Ctwgr%5E99e4fd424d63c3d08ee051eabd08d41f424ce5b4%7Ctwcon%5Es1_&ref_url=https%3A%2F%2Fpublictv.in%2Frishab-shetty-reveals-the-soul-of-kantara-chapter-1-story%2F

ಇದು ನಮ್ಮ ವರ್ಕ್ ಶಾಪ್. ಇಲ್ಲಿ ಪಾತ್ರಕ್ಕೆ ಜೀವ ತುಂಬುವ ಕೆಲಸ ಆಯಿತು. ಎಲ್ಲ ಕಲಾವಿದರು ಕಲ್ಪನೆಗೆ ಭಾವನೆ ತುಂಬುವ ಕೆಲಸವನ್ನು ಮಾಡಿದರು. ಇದು ಒಂದು ರೀತಿ ಕಥೆಯ ಆತ್ಮವನ್ನ ಹಸ್ತಾಂತರಿಸಿದ ಕ್ಷಣವೂ ಆಗಿತ್ತು ಅಂತಲೇ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

error: Content is protected !!