ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಹಗರಣದಲ್ಲಿ ಅಸ್ಸಾಂನ ನಾಗರಿಕ ಸೇವೆ( ಎಸಿಎಸ್)ಗಳ ಮಹಿಳಾ ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದೆ. ಅವರ ಮನೆಯಲ್ಲಿ 2 ಕೋಟಿ ರೂ. ನಗದು, ಭಾರಿ ಚಿನ್ನಾಭರಣಗಳು ಪತ್ತೆಯಾಗಿವೆ.
ಅವರನ್ನು ಬಾರ್ಪೇಟಾ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವರು ಹಿಂದೂ ಕುಟುಂಬಗಳ ಭೂಮಿಯನ್ನು ಮುಸ್ಲಿಮರಿಗೆ ಅಕ್ರಮವಾಗಿ ವರ್ಗಾಯಿಸಿದ್ದರು. ಇಷ್ಟೇ ಅಲ್ಲದೆ, ಅವರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ತನಿಖೆಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಶೇಷ ತಂಡಕ್ಕೆ ಆದೇಶಿಸಿದ್ದಾರೆ.