Saturday, August 30, 2025

RSS ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿರುವುದರಿಂದ ಎಲ್ಲವೂ ಮುಗಿದಿದೆ: ಡಿಕೆಶಿ ಪರ ಖರ್ಗೆ ಬ್ಯಾಟಿಂಗ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದನದಲ್ಲಿ ಡಿ.ಕೆ.ಶಿವಕುಮಾರ್ RSS ಗೀತೆ ಹಾಡಿದ್ದು ತಪ್ಪು. ಆದರೆ, ಕ್ಷಮೆ ಕೇಳಿರುವುದರಿಂದ ಎಲ್ಲವೂ ಮುಗಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಹಾಗೆ ಹೇಳಬಾರದಿತ್ತು ಹೇಳಿದ್ದಾರೆ. RSS ಗೀತೆ ಹೇಳಿದೆ ಮೇಲೆ ಅವರು ಕ್ಷಮೆ ಕೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗೀತು. ಕ್ಷಮೆ ಕೇಳಿದ ಮೇಲೆ ಮುಗೀತು. ಪದೇ ಪದೇ ಅದನ್ನ ಎತ್ತಿ ಹಿಡಿಯೋದು ಬೇಡ. ಕ್ಲೋಸ್ ಆದ ಕೇಸ್ ಓಪನ್ ಮಾಡೋಕೆ ನಾನು ಹೋಗಲ್ಲ. ಮುಂದೆ ಯಾರೂ ಹೀಗೆ ಮಾಡಬಾರದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ