ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆಗಳು ಆರಂಭವಾಗಿವೆ. ಸಮಾಜದ ವಿವಿಧ ವರ್ಗಗಳಿಂದ ಈ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ಕೆ ಶುಭಾಶಯಗಳನ್ನು ಕೋರಲಾಗುತ್ತಿದೆ.
ಭಾರತೀಯ ಚಲನಚಿತ್ರೋದ್ಯಮದ ಅನೇಕ ನಟರು ಸಹ ತಮ್ಮದೇ ಆದ ರೀತಿಯಲ್ಲಿ ಸಂಘಕ್ಕೆ ಶುಭ ಹಾರೈಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವಿಕ್ರಮ್ ಮೆಸ್ಸಿ, ಅರ್ಜುನ್ ರಾಂಪಾಲ್, ತಮನ್ನಾ ಭಾಟಿಯಾ, ಮನೀಷಾ ಕೊಯಿರಾಲ ಮುಂತಾದವರು ಸಂಘದ ಅದ್ಭುತ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ.
ಬಾಲಿವುಡ್ ನಟಿ ತಮನ್ನಾ ಭಾಟಿಯಾ, 100 ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘100 ವರ್ಷಗಳ ಅದ್ಭುತ ಪ್ರಯಾಣವನ್ನು ಪೂರ್ಣಗೊಳಿಸಿದ ಆರ್‌ಎಸ್‌ಎಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಸೇವೆಯ ಈ ಸ್ಪೂರ್ತಿದಾಯಕ ಪ್ರಯಾಣ ಮುಂದುವರಿಯಲಿ’ ಎಂದಿದ್ದಾರೆ.
ನಟ ವಿಕ್ರಾಂತ್ ಮಾಸ್ಸಿ, ‘ಆರ್‌ಎಸ್‌ಎಸ್‌ನ 100 ವರ್ಷಗಳನ್ನು ಪೂರೈಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಏಕೆಂದರೆ ಒಗ್ಗಟ್ಟು, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ದೇಶ ಬಲಿಷ್ಠವಾಗಬಹುದು ಎಂದು ನಾನು ಯಾವಾಗಲೂ ನಂಬುತ್ತೇನೆ. ಮತ್ತು ಆರ್‌ಎಸ್‌ಎಸ್ 100 ವರ್ಷಗಳಿಂದ ನಿರಂತರವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ ಮತ್ತು ಭವಿಷ್ಯದಲ್ಲಿಯೂ ಸೇವೆ ಸಲ್ಲಿಸುತ್ತಲೇ ಇರುತ್ತದೆ. ಈ ಶುಭ ಸಂದರ್ಭದಲ್ಲಿ, ಸಂಘದ ಎಲ್ಲ ಸದಸ್ಯರಿಗೂ ನಾನು ಶುಭ ಹಾರೈಸುತ್ತೇನೆ’ ಎಂದು ಶುಭ ಹಾರೈಸಿದರು.
ನಟ ಅರ್ಜುನ್ ರಾಂಪಾಲ್, ‘ಸ್ವಯಂ ಶಿಸ್ತು, ದೇಶಭಕ್ತಿ ಮತ್ತು ನಿಸ್ವಾರ್ಥ ಸೇವೆಯ ಮೂಲಕ, ಕೋಟ್ಯಂತರ ಸ್ವಯಂಸೇವಕರು ಭಾರತ ಮಾತೆಯ ಸೇವೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಲ್ಲಾ ಆರ್‌ಎಸ್‌ಎಸ್ ಸಹೋದರರಿಗೆ ಶತಮಾನೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ’ ಎಂದು ಶುಭ ಹಾರೈಸಿದರು.