ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಧಿಮೋರು ಜೊತೆ ಕಮಿಟ್‌ಮೆಂಟ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ನಿದರ್ಶನದಂತೆ ನಟಿ ಸಮಂತಾ ದೀಪಾವಳಿ ಹಬ್ಬವನ್ನು ರಾಜ್ ಫ್ಯಾಮಿಲಿ ಜೊತೆ ಆಚರಿಸಿದ್ದಾರೆ.
ನಟಿ ಸಮಂತಾ ಬಾಯ್ಫ್ರೆಂಡ್ ಜೊತೆಗೆ ಲಿವಿನ್ನಲ್ಲಿರುವ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದಾರೆ. ಈ ಇಬ್ಬರೂ ಪರಸ್ಪರ ಲಿವಿನ್ ರಿಲೇಷನ್ನಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವಾರು ತಿಂಗಳುಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಇಬ್ಬರೂ ಸಹ ಇದನ್ನು ಖಾತ್ರಿ ಪಡಿಸಿರಲಿಲ್ಲ. ಇದೀಗ ಸಮಂತಾ, ರಾಜ್ ಅವರ ಕುಟುಂಬದ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದೀಗ ನಟಿ ಸಮಂತಾ, ದೀಪಾವಳಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಜೊತೆಗೆ ದೀಪಾವಳಿ ಆಚರಣೆ ಮಾಡಿದ್ದಾರೆ. ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗಿನ ಚಿತ್ರವನ್ನು ಸಮಂತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಜ್ ಅವರ ತಂದೆ-ತಾಯಿ ಮತ್ತು ಸಹೋದರರು ಸಹ ಇದ್ದಾರೆ. ಸಮಂತಾ ಸಹ ಅವರ ಜೊತೆಗೆ ಒಟ್ಟಿಗೆ ಕೂತು ‘ಫ್ಯಾಮಿಲಿ ಫೋಟೊ’ ತೆಗೆಸಿಕೊಂಡಿದ್ದಾರೆ. ಜೊತೆಗೆ ರಾಜ್ ಅವರ ಮನೆಯ ಹಲವು ಚಿತ್ರಗಳನ್ನು ಸಹ ಸಮಂತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

