Friday, October 3, 2025

ಏಕಾಏಕಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕಾಏಕಿ ಫ್ಯಾನ್ಸ್ ಗೆ ನಟಿ ರಚಿತಾ ರಾಮ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವೇ ಖುದ್ದು ಫ್ಯಾನ್ಸ್ ಗೆ ಪತ್ರ ಬರೆದು ಆಹ್ವಾನ ಕೊಟ್ಟಿದ್ದಾರೆ. ಇಷ್ಟಕ್ಕೂ ಯಾವ ಕಾರಣಕ್ಕೆ ಪತ್ರ ಬರೆದಿದ್ದಾರೆ ಗೊತ್ತಿದ್ಯಾ?`

ಅಕ್ಟೋಬರ್ 3, ರಚಿತಾ ರಾಮ್ ಹುಟ್ಟುಹಬ್ಬ. ಹೀಗಾಗಿ ಈ ದಿನ ಬೆಂಗಳೂರಿನ ಆರ್‌ಆರ್‌ ನಗರದ ತಮ್ಮ ನಿವಾಸಕ್ಕೆ ಅಭಿಮಾನಿಗಳನ್ನ ಪ್ರೀತಿಯಿಂದ ಆಹ್ವಾನಿಸಿದ್ದಾರೆ. `ಫ್ಯಾನ್ಸ್, ಕುಟುಂಬಸ್ಥರ ಒತ್ತಾಯದ ಮೇರೆಗೆ ನಾನು ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ. ಇದು ಹುಟ್ಟುಹಬ್ಬದ ಆಚರಣೆ ಅಲ್ಲ ನಮ್ಮ ಸಂಬಂಧದ ಸಂಭ್ರಮ’ ಎಂದು ಬರೆದುಕೊಂಡಿರುವುದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.