Tuesday, September 30, 2025

ಡಬ್ಬಿಂಗ್ ನೆಪದಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.25 ಲಕ್ಷ ವಂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರವೊಂದನ್ನು ಡಬ್ಬಿಂಗ್ ಮಾಡುವುದಾಗಿ ನಂಬಿಸಿ ಆನ್ ಲೈನ್ ವಂಚಕರು ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.25 ಲಕ್ಷ ಪಡೆದು ವಂಚಿಸಿದ್ದಾರೆ.

ನಟ ಉಪೇಂದ್ರ, ಪತ್ನಿ ಪ್ರಿಯಾಂಕಾಗೆ ವಂಚಿಸಿದ್ದ ಬೆನ್ನಲ್ಲೇ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾ ಡಬ್ಬಿಂಗ್ ನೆಪದಲ್ಲಿ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ದಾಖಲೆ ಪಡೆದು ಸೈಬರ್ ವಂಚಕರು 4.25 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ಬಿಂಗ್ ಮಾಡುವಂತ ಆಮಿಷವೊಡ್ಡಿ ಸೈಬರ್ ವಂಚಕರು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈ ಪೊಲೀಸರಿಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ದೂರು ನೀಡಿದ್ದಾರೆ.