ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ಚಡಚಣ ಎಸ್ ಬಿಐ ಬ್ಯಾಂಕ್ ನಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಹುಲಜಂತಿ ಗ್ರಾಮದ ಮನೆ ಮೇಲೆ ಲಭಿಸಿದ ಬ್ಯಾಗ್ ನಲ್ಲಿ 41 ಲಕ್ಷ, 4 ಸಾವಿರ ನಗದು, 36 ಪ್ಯಾಕೇಟ್ಸನ್ 6.54 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ಜಿಲ್ಲೆಯ ಚಡಚಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ. 16 ರಂದು ಇಲ್ಲಿನ ಎಸ್ ಬಿಐ ಬ್ಯಾಂಕ್ ನಲ್ಲಿ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ, ದರೋಡೆ ಮಾಡಿಕೊಂಡು ಹೋಗಿದ್ದ ಆರೋಪಿಗಳ ಕಾರು, ಬೈಕ್ ಮಧ್ಯೆ ಹುಲಜಂತಿ ಗ್ರಾಮದಲ್ಲಿ ಅಪಘಾತ ಆಗಿತ್ತು. ಆ ಸಂದರ್ಭದಲ್ಲಿ ಕಾರ್‌ನಲ್ಲಿ 1 ಲಕ್ಷ 3 ಸಾವಿರ ನಗದು, 21 ಗೋಲ್ಡ್ ಪ್ಯಾಕೇಟ್ಸ್ ಸಿಕ್ಕಿತ್ತು. ಸದ್ಯ ಸಿಕ್ಕಿರು ಬ್ಯಾಗಿನಲ್ಲಿ 41 ಲಕ್ಷ 4 ಸಾವಿರ ನಗದು ಪತ್ತೆಯಾಗಿದೆ. ಅಲ್ಲದೇ, 36 ಪ್ಯಾಕೇಟ್ಸ್‌ನ 6.54 ಕೆಜಿ ಚಿನ್ನ ಸಿಕ್ಕಿದೆ ಎಂದರು.
ಹುಲಜಂತಿಯಲ್ಲಿ ಸಿಕ್ಕ ವಾಹನ ಚಡಚಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೇ ಮಹಾರಾಷ್ಟ್ರದ ಮಂಗಳವಾಡಿ ಪೊಲೀಸರು, ಚಡಚಣ ಪೊಲೀಸರಿಂದ ತನಿಖೆ ಮುಂದುವರಿದಿದೆ. ಆದಷ್ಟು ಬೇಗನೆ ಉಳಿದ ನಗದು, ಚಿನ್ನ ಸೇರಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.