Monday, November 3, 2025

ಜೀವ ತೆಗೆದ ಶಾಲೆಯ ನಿರ್ಲಕ್ಷ್ಯ: ಸಂಪ್‌ಗೆ ಬಿದ್ದು 3ನೇ ಕ್ಲಾಸ್ ವಿದ್ಯಾರ್ಥಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿ ಗ್ರಾಮದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದ್ದು, ಶಾಲಾ ಆವರಣದಲ್ಲಿನ ಸಂಪ್‌ನಲ್ಲಿ ಬಿದ್ದು ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.

ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಒಂಬತ್ತು ವರ್ಷದ ನರೇಂದ್ರ ಮೃತ ವಿದ್ಯಾರ್ಥಿ. ನರೇಂದ್ರ ಇಂದು ಬೆಳಗ್ಗೆ ಶಾಲೆಗೆ ಬಂದ ನಂತರ ಕಾಣೆಯಾಗಿದ್ದ.

ವಿದ್ಯಾರ್ಥಿ ನಾಪತ್ತೆಯಾದ ಕಾರಣ ಆತಂಕಗೊಂಡ ಪೋಷಕರು ಮತ್ತು ಗ್ರಾಮಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರು. ತೀವ್ರ ಹುಡುಕಾಟದ ನಂತರ, ವಿದ್ಯಾರ್ಥಿಯ ಶವವು ಅಂತಿಮವಾಗಿ ಶಾಲಾ ಆವರಣದಲ್ಲಿರುವ ನೀರಿನ ಸಂಪ್‌ನಲ್ಲಿ ಪತ್ತೆಯಾಗಿದೆ. ಈ ಘಟನೆಯು ಶಾಲೆಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!