ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಗುರುವಾರ 12 ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥಕೇಶೋ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆ ಬಾಲಕ ತನ್ನ ತಾಯಿಯೊಂದಿಗೆ ಸ್ಮಾರ್ಟ್‌ಫೋನ್‌ಗಾಗಿ ಆಗಾಗ್ಗೆ ಜಗಳವಾಡುತ್ತಿದ್ದ, ಯುವಕ ತನ್ನ ತಾಯಿ ಬದ್ರಿಕಾ ದೇವಿ ಬಳಿ ಸ್ಮಾರ್ಟ್‌ಫೋನ್‌ಗಾಗಿ ಬೇಡಿಕೆ ಇಡುತ್ತಿದ್ದ. ಆದರೆ, ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಆಕೆ ಅದನ್ನು ಖರೀದಿಸಲು ನಿರಾಕರಿಸಿದ್ದರು.
ಬಾಲಕ ಶಾಲೆಯಿಂದ ಹಿಂತಿರುಗಿದಾಗ ಈ ವಿಷಯವಾಗಿ ತನ್ನ ತಾಯಿಯೊಂದಿಗೆ ಮತ್ತೊಂದು ಸುತ್ತಿನ ಜಗಳವಾಡಿದ್ದ. ಮಧ್ಯಾಹ್ನ ಹತ್ತಿರದ ಹೊಲದಿಂದ ಹಿಂತಿರುಗಿದಾಗ, ಆತ ತನ್ನ ಹುಲ್ಲಿನ ಮನೆಯ ಛಾವಣಿಯಿಂದ ಬಟ್ಟೆಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.