Saturday, January 3, 2026

ಭದ್ರತಾ ಲೋಪ: ತಿರುಪತಿ ದೇವಸ್ಥಾನದ ಗೋಪುರ ಹತ್ತಿ ಕುಡುಕನ ರಂಪಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಕುಡುಕನೊಬ್ಬ ದೇಗುಲ ಕಂಪೌಂಡ್ ಹಾರಿ ಗೋಪುರದ ಮೇಲೆಗೆ ಏರಿ, ಭಕ್ತರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಶುಕ್ರವಾರ ರಾತ್ರಿ ‘ಏಕಾಂತ ಸೇವೆ’ ಮುಗಿದ ನಂತರ ಈ ಘಟನೆ ಸಂಭವಿಸಿದೆ.

ದೇವಾಲಯದ ಗೋಪುರ ಏರಿದ ವ್ಯಕ್ತಿ ಅಲ್ಲಿನ ಪಾರಂಪರಿಕ ಕಳಶಗಳನ್ನು ಎಳೆಯಲು ಯತ್ನಿಸಿದ್ದು, ಪೋಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಶ್ರಮದ ಬಳಿಕ ಆರೋಪಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ಆರೋಪಿ ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ಎಂದು ಗುರುತಿಸಲಾಗಿದೆ. ಮದ್ಯಪಾನದ ಪರಿಣಾಮದಿಂದ ಕೆಳಗೆ ಇಳಿಯಲು ನಿರಾಕರಿಸಿದ್ದರೂ, ಸಿಬ್ಬಂದಿಯ ತ್ವರಿತ ಕ್ರಮದಿಂದ ಆತನನ್ನು ಕೆಳಗಿಳಿಸಿದ್ದಾರೆ.

error: Content is protected !!