Thursday, October 2, 2025

ಪ್ರವಾಹ ಸಂತ್ರಸ್ತರಿಗೆ ನೆರವಾದ ಹಿರಿಜೀವಗಳು: ಬಂಗಾರ,ಹಣ ಎಲ್ಲ ದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ಪ್ರವಾಹದಿಂದ ತತ್ತರಿಸಿರುವ ಪಂಜಾಬ್​ ಜನರಿಗೆ ನೆರವಾಗಲು ವೃದ್ಧೆಯರು ತಮ್ಮಲ್ಲಿದ್ದ ಎಲ್ಲ ಆಭರಣಗಳನ್ನು ದಾನವಾಗಿ ನೀಡಿದ್ದಾರೆ. ವರ್ಷಗಳ ಪರಿಶ್ರಮದಿಂದ ಕೂಡಿಟ್ಟ ಬಂಗಾರವನ್ನು ಜನರಿಗೆ ದಾನ ಮಾತಿ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಮಾತನಾಡಿದ ತಿಲಕ್‌ಪುರಿ ಗ್ರಾಮದ 75 ವರ್ಷದ ರಹೀಮಿ ಅವರು, ಇದನ್ನು ನನ್ನ ಮಗಳ ಮದುವೆಗಾಗಿ ಕೂಡಿಟ್ಟಿದ್ದೆ. ಆದರೆ, ಇದರ ಅವಶ್ಯಕತೆ ಈಗ ಪಂಜಾಬ್​ಗೆ ಇದೆ. 1996ರಲ್ಲಿ ನಾನೂ ಕೂಡ ಪ್ರವಾಹ ಸಂತ್ರಸ್ತೆಯಾಗಿದ್ದು, ಜನರ ಸಂಕಷ್ಟದ ಅರಿವಿದೆ. ಹಾಗಾಗಿ, ಈ ಆಭರಣ ಅವರ ನೆರವಿಗೆ ಇರಲಿ ಎಂದಿದ್ದಾರೆ.

ಇನ್ನು, ಸೋಹ್ನಾ ಬ್ಲಾಕ್‌ನ ನುನೆಹ್ರಾ ಗ್ರಾಮದ 70ರಿಂದ 80 ವರ್ಷ ವಯಸ್ಸಿನ ಮಹಿಳೆಯರು ಕೂಡಾ ಪ್ರವಾಹಪೀಡಿತರಿಗೆ ಸಹಾಯ ಮಾಡಲು ಸುಮಾರು 2 ಕೆ.ಜಿ ಬೆಳ್ಳಿ ಮತ್ತು 20 ಗ್ರಾಂ ಚಿನ್ನ ಹಾಗು 5 ಲಕ್ಷ ರೂ.ಗಳನ್ನು ದಾನ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ 85 ವರ್ಷದ ಅಸ್ಮೀನಾ ಅವರು, ಸಂತ್ರಸ್ತ ಹೆಣ್ಣು ಮಕ್ಕಳಿಗೆ ಮಾನವೀಯತೆಯ ನೆಲೆಯಲ್ಲಿ ನನ್ನ ಆಭರಣಗಳನ್ನು ನೀಡುತ್ತಿದ್ದೇನೆ ಎಂದು ತಿಳಿಸಿದರು.

ಅನೇಕ ಹಿರಿಜೀವಗಳು ತಮ್ಮ ಅಮೂಲ್ಯ ವಸ್ತುಗಳನ್ನು ದಾನ ಮಾಡಿದ್ದಾರೆ. ಆಭರಣ ಇಲ್ಲದವರು ತಮ್ಮಲ್ಲಿದ್ದ ಇತರೆ ವಸ್ತುಗಳನ್ನೂ ದಾನ ಮಾಡಿದ್ದಾರೆ.