ಅಂಕೋಲಾದ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಎಂ.ವಿ. ನಾಯ್ಕ ವಿಧಿವಶ!

ಹೊಸದಿಗಂತ ವರದಿ ಅಂಕೋಲಾ ಅಂಕೋಲಾ :ಜನಾನುರಾಗಿ ಪತ್ರಕರ್ತ ,ನಿವೃತ್ತ ಶಿಕ್ಷಕ ಮಾಧವ ವಿ. ನಾಯ್ಕ (86) ಗುರುವಾರ ನಿಧನರಾಗಿದ್ದಾರೆ. ಕೆಲ ಕಾಲದ ಅಸೌಖ್ಯದ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಮೃತರಾದರು. ಜ್ಞಾನಿಗಳು, ಸರಳ ಸಜ್ಜನರಾಗಿದ್ದ ಇವರು ಅವರ್ಸಾದ ಕಾತ್ಯಾಯನಿ ಹೈಸ್ಕೂಲಿನಲ್ಲಿ ಜನಾನುರಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಂತರ ವರದಿಗಾರರಾಗಿಯೂ ಜನಪರ ವರದಿಗಾರಿಕೆ ಮೂಲಕ ಗಮನ ಸೆಳೆದವರು. ಕೆಲ ವರ್ಷದಿಂದ ಕಾರವಾರದಲ್ಲಿ ನಿವೃತ್ತಿ ಜೀವನ ನಡೆಸಿದ್ದರು. ಪತ್ನಿ, ಇಬ್ಬರು ಪುತ್ರರು ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ. ಇದನ್ನೂ ಓದಿ: … Continue reading ಅಂಕೋಲಾದ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಎಂ.ವಿ. ನಾಯ್ಕ ವಿಧಿವಶ!