ಹೊಸದಿಗಂತ ವರದಿ ಅಂಕೋಲಾ
ಅಂಕೋಲಾ :ಜನಾನುರಾಗಿ ಪತ್ರಕರ್ತ ,ನಿವೃತ್ತ ಶಿಕ್ಷಕ ಮಾಧವ ವಿ. ನಾಯ್ಕ (86) ಗುರುವಾರ ನಿಧನರಾಗಿದ್ದಾರೆ.
ಕೆಲ ಕಾಲದ ಅಸೌಖ್ಯದ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಮೃತರಾದರು. ಜ್ಞಾನಿಗಳು, ಸರಳ ಸಜ್ಜನರಾಗಿದ್ದ ಇವರು ಅವರ್ಸಾದ ಕಾತ್ಯಾಯನಿ ಹೈಸ್ಕೂಲಿನಲ್ಲಿ ಜನಾನುರಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಂತರ ವರದಿಗಾರರಾಗಿಯೂ ಜನಪರ ವರದಿಗಾರಿಕೆ ಮೂಲಕ ಗಮನ ಸೆಳೆದವರು.
ಕೆಲ ವರ್ಷದಿಂದ ಕಾರವಾರದಲ್ಲಿ ನಿವೃತ್ತಿ ಜೀವನ ನಡೆಸಿದ್ದರು. ಪತ್ನಿ, ಇಬ್ಬರು ಪುತ್ರರು ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.
ಇದನ್ನೂ ಓದಿ:
ಎಂ.ವಿ. ನಾಯ್ಕ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಪ್ರಮುಖರಾದ ಭಾಸ್ಕರ ನಾರ್ವೇಕರ್, ಜಿ.ಪ ಮಾಜಿ ಸದಸ್ಯ ಉದಯ ನಾಯ್ಕ,ನಿವೃತ್ತ ಮುಖ್ಯಾಧ್ಯಾಪಕ ಎಂ.ಎಸ್.ಪ್ರಭು, ಅಂಕೋಲಾ ಕಾ.ನಿ.ಪತ್ರಕರ್ತರ ವೇದಿಕೆಯ ಪರವಾಗಿ ಅಧ್ಯಕ್ಷ ರಾಘು ಕಾಕರಮಠ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.



