ನೈಜೀರಿಯಾದಲ್ಲಿ ಸರಣಿ ಸ್ಫೋಟ: ಹಲವರ ದುರ್ಮ*ರಣ, 200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನೈಜೀರಿಯಾ ದೇಶದ ಈಶಾನ್ಯ ಭಾಗದ ಬೊರ್ನೊ ರಾಜ್ಯದಲ್ಲಿ ಸೋಮವಾರ ರಾತ್ರಿ ನಡೆದ ಸರಣಿ ಸ್ಫೋಟಗಳು ಭಾರೀ ಆತಂಕಕ್ಕೆ ಕಾರಣವಾಗಿವೆ. ರಾಜಧಾನಿ ಮೈದುಗುರಿಯಲ್ಲಿ ಮೂರು ಸ್ಥಳಗಳಲ್ಲಿ ಸಂಭವಿಸಿದ ಈ ಸ್ಫೋಟಗಳಿಂದ ಹಲವರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಗಳು ಮೈದುಗುರಿ ವಿಶ್ವವಿದ್ಯಾಲಯ ಆಸ್ಪತ್ರೆ, ಅಂಚೆ ಕಚೇರಿ ಹಾಗೂ ಮಾರುಕಟ್ಟೆಗಳ ಪ್ರವೇಶದ್ವಾರಗಳ ಬಳಿ ಸಂಭವಿಸಿದ್ದಾಗಿ ತುರ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. … Continue reading ನೈಜೀರಿಯಾದಲ್ಲಿ ಸರಣಿ ಸ್ಫೋಟ: ಹಲವರ ದುರ್ಮ*ರಣ, 200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ