October 9, 2026
Friday, October 9, 2026
spot_img

ನೈಜೀರಿಯಾದಲ್ಲಿ ಸರಣಿ ಸ್ಫೋಟ: ಹಲವರ ದುರ್ಮ*ರಣ, 200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೈಜೀರಿಯಾ ದೇಶದ ಈಶಾನ್ಯ ಭಾಗದ ಬೊರ್ನೊ ರಾಜ್ಯದಲ್ಲಿ ಸೋಮವಾರ ರಾತ್ರಿ ನಡೆದ ಸರಣಿ ಸ್ಫೋಟಗಳು ಭಾರೀ ಆತಂಕಕ್ಕೆ ಕಾರಣವಾಗಿವೆ. ರಾಜಧಾನಿ ಮೈದುಗುರಿಯಲ್ಲಿ ಮೂರು ಸ್ಥಳಗಳಲ್ಲಿ ಸಂಭವಿಸಿದ ಈ ಸ್ಫೋಟಗಳಿಂದ ಹಲವರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಗಳು ಮೈದುಗುರಿ ವಿಶ್ವವಿದ್ಯಾಲಯ ಆಸ್ಪತ್ರೆ, ಅಂಚೆ ಕಚೇರಿ ಹಾಗೂ ಮಾರುಕಟ್ಟೆಗಳ ಪ್ರವೇಶದ್ವಾರಗಳ ಬಳಿ ಸಂಭವಿಸಿದ್ದಾಗಿ ತುರ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:

ಈ ದಾಳಿಗಳು ಆತ್ಮಹತ್ಯಾ ಬಾಂಬ್ ದಾಳಿ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲದಿದ್ದರೂ, ಆ ಪ್ರದೇಶದಲ್ಲಿ ಸಕ್ರಿಯವಾಗಿರುವ ಬೋಕೋ ಹರಮ್ ಮೇಲೆ ಅನುಮಾನ ವ್ಯಕ್ತವಾಗಿದೆ.

ಉತ್ತರ ನೈಜೀರಿಯಾದಲ್ಲಿ ಉಗ್ರ ಚಟುವಟಿಕೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಘಟನೆ ಭದ್ರತಾ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ. ತನಿಖೆ ಮುಂದುವರಿದಿದೆ.

Must Read