Monday, October 13, 2025

ಜಾಲಿ ಎಲ್ಎಲ್ ಬಿ 3 ಚಿತ್ರ ಬಿಡುಗಡೆಗೂ ಮುನ್ನವೇ ಶಾಕ್: ನಟ ಅಕ್ಷಯ್, ಅರ್ಶದ್ ಗೆ ಸಮನ್ಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅರ್ಶದ್ ವಾರ್ಸಿ ಅಭಿನಯದ ಜಾಲಿ ಎಲ್ಎಲ್ ಬಿ 3 ಚಿತ್ರ ಬಿಡುಗಡೆಗೂ ಮುನ್ನವೇ ಪುಣೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ವಕೀಲ ವಾಜೇದ್ ರಹೀಮ್ ಖಾನ್ ಸಲ್ಲಿಸಿದ ಅರ್ಜಿಯ ಮೇರೆಗೆ ಪುಣೆಯ ಸಿವಿಲ್ ನ್ಯಾಯಾಲಯವು ನಟರಾದ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಮತ್ತು ನಿರ್ದೇಶಕ ಸುಭಾಷ್ ಕಪೂರ್ ಅವರಿಗೆ ಅವರ ಮುಂಬರುವ ಚಿತ್ರ ಜಾಲಿ ಎಲ್ ಎಲ್ ಬಿ 3 ಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ.

ವಕೀಲ ವಾಜೇದ್ ರಹೀಮ್ ಖಾನ್ ಅವರ ಪ್ರಕಾರ, ಜಾಲಿ LLB 3 ಚಿತ್ರವು ಕಾನೂನು ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತದೆ ಮತ್ತು ನ್ಯಾಯಾಲಯದ ಕಲಾಪಗಳನ್ನು ಅಗೌರವಿಸುತ್ತದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಂತರ ಈ ಕ್ರಮ ಕೈಗೊಂಡಿದೆ.

error: Content is protected !!