Tuesday, September 30, 2025

ದಸರಾ ಸಂಭ್ರಮದಲ್ಲಿದ್ದ ಜನತೆಗೆ ಶಾಕ್: KSRTC ಬಸ್ ದರ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ 20 ರೂ. ಏರಿಕೆ ಏರಿಕೆಯಾಗಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ 20 ರೂಪಾಯಿ ಏರಿಕೆ ಮಾಡಿದೆ.

ಇನ್ನೂ ಸಾಮಾನ್ಯ ಕೆಎಸ್‌ಆರ್‌ಟಿಸಿ ಬಸ್, ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.

ಬಸ್‌ ಟಿಕೆಟ್‌ ದರ ವಿವರ?
170 ರೂ ಇದ್ದ ಕರ್ನಾಟಕ ಸಾರಿಗೆ ವೇಗದೂತ ದರ ಈಗ 190 ರೂ.ಗೆ ಏರಿಕೆ

ರಾಜಾಹಂಸ – 270 ರಿಂದ 290 ರೂ.

ಐರಾವತ – 430 ರಿಂದ 450 ರೂ.

ತಡೆ ರಹಿತ ಸಾರಿಗೆ – 210 ರಿಂದ 240 ರೂ.

ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.