ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತ ಪಟ್ಟಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಮಿತ್ರನಗರ ನಿವಾಸಿ ಕೇಶವ ರಾವ್ ಮತ್ತು ಉಷಾ ದಂಪತಿಯ ದ್ವಿತೀಯ ಪುತ್ರಿ ಅಪೂರ್ವ (21)ಮೃತ ಯುವತಿ.
ಬ್ಯೂಟೀಷಿಯನ್ ವೃತ್ತಿ ಮಾಡುತ್ತಿದ್ದ ಅಪೂರ್ವ ಕಳೆದ ಕೆಲ ದಿನಗಳಿಂದ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಲು.ಆಕೆಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಶುಕ್ರವಾರ ಬೆಳಿಗ್ಗೆ ಅಪೂರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.
ಮೃತ ಅಪೂರ್ವ ತಂದೆ,ತಾಯಿ ಇಬ್ಬರು ಸಹೋದರಿಯರನ್ನ ಅಗಲಿದ್ದಾಳೆ.