ಹೊಸದಿಗಂತ ವರದಿ ಕಲಬುರಗಿ:
ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಗೆ ಒಂದು ವಾರಗಳ ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿ, ಬಳ್ಳಾರಿ ಜಿಲ್ಲಾ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಹಿಂದು ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗಿಯಾಗುವಂತೆ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಹ್ವಾನ ಬಂದ ಹಿನ್ನೆಲೆಯಲ್ಲಿ,ಬಳ್ಳಾರಿಗೆ ಹೊರಟಿದ್ದು,ಧರ್ಮ ಸಭೆಯಲ್ಲಿ ಭಾಗಿಯಾಗದಂತೆ
ತಡೆಯಲು ಬಳ್ಳಾರಿ ಪ್ರವೇಶ ನಿರ್ಬಂಧ ಹೇರಿದ ಆದೇಶ ಪ್ರತಿಯನ್ನು ಪೋಲಿಸ್ ಅಧಿಕಾರಿಗಳು ಸ್ವಾಮಿಜಿಗಳಿಗೆ ನೀಡಿದ್ದಾರೆ.
ಇನ್ನೂ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದಲ್ಲಿ ಪೂಜೆಗೆ ತೆರಳುತ್ತಿದ್ದಾಗ, ಬಳ್ಳಾರಿಯ ಸಹಾಯಕ ಆಯುಕ್ತರು ಹೊರಡಿಸಿದ ಬಳ್ಳಾರಿ ಪ್ರವೇಶದ ನಿರ್ಬಂಧದ ಆದೇಶದ ಪ್ರತಿಯನ್ನು ಪೋಲಿಸ್ ಅಧಿಕಾರಿಗಳು ಸ್ವಾಮೀಜಿಗಳಿಗೆ ನೀಡಿದ್ದು,ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಉಗ್ರವಾಗಿ ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಹಿಂದುಗಳನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಆಡಳಿತದಲ್ಲಿ ನಿರಂತರವಾಗಿ ನಡೆಯುತ್ತಿದೆ.ಹಿಂದುಗಳನ್ನು ಸಿಎಂ ಸಿದ್ದರಾಮಯ್ಯನವರ ಸರಕಾರ ದಮನ ಮಾಡುತ್ತಿರುವ ನೀತಿಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.