ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಅಂದುಕೊಂಡ ಮಟ್ಟಿಗೆ ಸದ್ದು ಮಾಡಲಿಲ್ಲ. ಆದರೆ ಸಿನಿಮಾದ ಕಥೆ ಅದ್ಭುತವಾಗಿದ್ದು, ಒಂದು ರೀತಿಯ ಫ್ಯಾನ್ಸ್‌ಗೆ ಮಾತ್ರ ಇಷ್ಟವಾಗಿತ್ತು. ಸಿನಿಮಾದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿವೆ. ಇತ್ತ ಈ ಸಿನಿಮಾ ಮೇಲೆ ಬಾಲಿವುಡ್ ಕಣ್ಣು ಬಿದ್ದಿದೆ ಎಂದು ಹೇಳಲಾಗಿದ್ದು, ಸಿನಿಮಾ ರೀಮೇಕ್ ನಡೀತಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು.
ಆದರೆ ಇದೀಗ ನಟ ಸಿದ್ಧಾಂತ್ ಚತುರ್ವೇದಿ ಇದಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಡಿಯರ್ ಕಾಮ್ರೇಡ್ ಹಿಂದಿ ವರ್ಷನ್‌ನಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ಪ್ರತಿಭಾ ರಾಂತ ನಟನೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಒಂದು ಪೋಸ್ಟ್ ಮೂಲಕ ಸಿದ್ಧಾಂತ್ ಎಲ್ಲದಕ್ಕೂ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ಇದನ್ನೂ ಓದಿ: Why So | ಸಣ್ಣ ವಯಸ್ಸಿನಲ್ಲೇ ಕಿವಿ ಚುಚ್ಚಿಸೋದು ಯಾಕೆ? ಇದರ ಹಿಂದಿರೋ ಕಾರಣವಾದ್ರೂ ಏನು?
ಇದು ನಿಜವಾದ ಸುದ್ದಿ ಅಲ್ಲ. ನಾನು ರೀಮೇಕ್ ಸಿನಿಮಾಗಳನ್ನು ಮಾಡೋದಿಲ್ಲ. ಡಿಯರ್ ಕಾಮ್ರೇಡ್ ಸಿನಿಮಾ ನೋಡಿದ್ದೇನೆ, ನನಗೆ ತುಂಬಾ ಇಷ್ಟವಾಗಿದೆ. ಆದರೂ ರೀಮೇಕ್‌ನಲ್ಲಿ ನಟಿಸೋದಿಲ್ಲ. ರಶ್ಮಿಕಾ ಹಾಗೂ ವಿಜಯ್ ಬಗ್ಗೆ ತುಂಬಾನೇ ಗೌರವ ಇದೆ. ಪ್ರತಿಭಾ ರಾಂತ ಜತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ, ಆದರೆ ಒರಿಜಿನಲ್ ಸ್ಕ್ರಿಪ್ಟ್ ಇದ್ರೆ ಮಾತ್ರ ಎಂದು ಹೇಳಿದ್ದಾರೆ.

