Saturday, September 27, 2025

ಶಿರಸಿಯ ಶ್ರೀ ಮಾರಿಕಾಂಬಾ ದೇಗುಲಕ್ಕೆ ಶಿವರಾಜ್‌ಕುಮಾರ್‌ ದಂಪತಿ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಅನಾರೋಗ್ಯಕ್ಕೆ ಒಳಗಾಗಿದ್ದ ನಟ ಶಿವರಾಜ್‌ಕುಮಾರ್‌ ಇದೀಗ ಆರೋಗ್ಯವಾಗಿದ್ದಾರೆ. ಅನಾರೋಗ್ಯದ ಕಾರಣ ಶಿರಸಿಯ ಮಾರಿಕಾಂಬ ತಾಯಿಗೆ ಹರಕೆ ಹೊತ್ತಿದ್ದು, ಅದನ್ನು ತೀರಿಸಿದ್ದಾರೆ.

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ ಶಿವಣ್ಣ ದಂಪತಿ ತಮ್ಮ ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿದರು. ಈ ಹಿಂದೆ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಸಹ ಶಿರಸಿ ಮಾರಿಕಾಂಬೆ ಸನ್ನಿದಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು.

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿರುವ ಶಿವರಾಜ್ ಕುಮಾರ್ ಶಿರಸಿಗೆ ಆಗಮಿಸಿದ್ದು, ಮಾರಿಕಾಂಬಾ ಸನ್ನಿದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.