Wednesday, September 24, 2025

ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ: ಇವತ್ತಿನ ದರಪಟ್ಟಿ ಹೀಗಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಚಿನ್ನದ ಬೆಲೆ ತಾತ್ಕಾಲಿಕ ಇಳಿಕೆಯನ್ನು ಕಂಡಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 30 ರೂ ಇಳಿಯುವ ಮೂಲಕ 10,575 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 11,537 ರೂ ಆಗಿದೆ. ಬೆಳ್ಳಿ ಬೆಲೆ 140 ರೂ ಪ್ರತಿಗ್ರಾಂ ನಿಲ್ಲಿದ್ದು, 100 ಗ್ರಾಂ ಬೆಳ್ಳಿಯು 13,900 ರೂ ಗೆ ಲಭ್ಯವಿದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಬೆಳ್ಳಿಯ ದರ 14,900 ರೂ ತಲುಪಿದೆ.

ಚಿನ್ನದ ಬೆಲೆ ಬೆಂಗಳೂರು ಮತ್ತು ಮುಂಬೈನಲ್ಲಿ 10,575 ರೂ, ಚೆನ್ನೈ 10,600 ರೂ, ಡೆಹಲಿ ಮತ್ತು ಜೈಪುರ್ 10,590 ರೂ, ಕೊಲ್ಕತಾ, ಕೇರಳ ಮತ್ತು ಭುವನೇಶ್ವರ್ 10,575 ರೂ. ಆಗಿದೆ.

ಮಲೇಷ್ಯಾ 10,373 ರೂ, ದುಬೈ 10,195 ರೂ, ಅಮೆರಿಕ 10,427 ರೂ, ಸಿಂಗಾಪುರ 10,310 ರೂ, ಕತಾರ್ 10,262 ರೂ, ಸೌದಿ ಅರೇಬಿಯಾ 10,150 ರೂ, ಓಮನ್ 10,279 ರೂ, ಕುವೇತ್ 9,981 ರೂ. ಆಗಿದೆ.

ಚಿನ್ನದ ಇಳಿಕೆಗೆ ಡಾಲರ್ ಮೌಲ್ಯದ 0.10% ಏರಿಕೆ, ಹೂಡಿಕೆದಾರರಿಂದ ಲಾಭ ಪಡೆದು ಮಾರಾಟ ಮಾಡುವುದು ಮತ್ತು ಬೇಡಿಕೆಯ ಕುಸಿತ ಪ್ರಮುಖ ಕಾರಣಗಳಾಗಿವೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಸುಮಾರು 130% ರಷ್ಟು ಏರಿಕೆ ಕಂಡಿದೆ. ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು, ಜಾಗತಿಕ ಆರ್ಥಿಕ ಸ್ಥಿತಿಯ ಕುಂಠಿತ ಭಯ ಮತ್ತು ಕೇಂದ್ರ ಬ್ಯಾಂಕ್ ಖರೀದಿಗಳು ಈ ಏರಿಕೆಗೆ ಕಾರಣಗಳಾಗಿ ಕಂಡುಬರುತ್ತಿವೆ.

ಇದನ್ನೂ ಓದಿ