Wednesday, October 22, 2025

SHOCKING | ಸಿಲಿಂಡರ್‌ ತರಲು ಹೇಳಿದ ತಾಯಿಯ ಎದೆಗೆ ಗುದ್ದಿ ಗುದ್ದಿ ಕೊಂದ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಂಡರ್‌ ಖಾಲಿಯಾಗಿದೆ ತೆಗೆದುಕೊಂಡು ಬಾ ಎಂದು ಹೇಳಿದ ತಾಯಿ ಎದೆಗೆ ಗುದ್ದಿ ಗುದ್ದಿ ಮಗನೇ ಕೊಂದಿದ್ದಾನೆ.

ಜೈಪುರದ ಕರ್ದಾನಿಯ ನವೀನ್ ಸಿಂಗ್‌ ತಾಯಿಯನ್ನು ಕೊಂದ ಮಗ! ಇಂದು ಬೆಳಗ್ಗೆ 6:30ರ ಸುಮಾರಿಗೆ ಸಂತೋಷ್ ದೇವಿ ತನ್ನ ಮಗ ನವೀನ್ ಸಿಂಗ್‌ಗೆ ಸಿಲಿಂಡರ್ ತರಲು ಹೇಳಿದರು. ಇದಕ್ಕೆ ಮೊದಲು ನವೀನ್ ಕೋಪಗೊಂಡನು.

ಮೊದಲಿಗೆ ತಾಯಿಯನ್ನು ನಿಂದಿಸಿದ್ದು ಆಕೆಗೆ ಬಲವಾಗಿ ಗುದ್ದಿದ್ದಾನೆ. ಇದರಿಂದಾಗಿ ಸಂತೋಷ್ ದೇವಿ ಪ್ರಜ್ಞೆ ತಪ್ಪಿದ್ದಾನೆ. ಈ ವೇಳೆ ದೇವಿಯನ್ನು ರಕ್ಷಿಸಲು ಪತಿ ಲಕ್ಷ್ಮಣ್ ಸಿಂಗ್ ಮತ್ತು ಹೆಣ್ಣುಮಕ್ಕಳು ಪ್ರಯತ್ನಿಸಿದರು. ಆದರೆ ನವೀನ್‌ನ ಕೋಪ ತಡೆಯಲಾಗಲಿಲ್ಲ. ಕೋಪದಿಂದ, ಅವನು ಅವಳನ್ನು ಕತ್ತು ಹಿಸುಕಿದ್ದಾನೆ. ಕುಟುಂಬದವರು ತಕ್ಷಣ ಪ್ರಜ್ಞೆ ತಪ್ಪಿದ ಸಂತೋಷ್ ದೇವಿಯನ್ನು ಸಿಕಾರ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆಯ ನಂತರ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಕ್ಕೆ ಹಸ್ತಾಂತರಿಸಿದರು.

ನವೀನ್‌ಗೆ ಮದುವೆಯಾಗಿದ್ದು, ಹೆಂಡತಿ ಈತನನ್ನು ಬಿಟ್ಟು ತನ್ನ ತವರು ಮನೆಗೆ ತೆರಳಿದ್ದಳು. ಅಲ್ಲಿ ಈತನ ವಿರುದ್ಧ ಪೊಲೀಸರಿಗೆ ದೂರು ನೀಡುವಷ್ಟು ಸಮಸ್ಯೆ ಆಗಿತ್ತು. ಈ ಫ್ರಸ್ಟ್ರೇಷನ್‌ನ್ನು ಮಗ ತಾಯಿಯ ಮೇಲೆ ತೀರಿಸಿದ್ದಾನೆ ಎಂದು ಹೇಳಲಾಗಿದೆ.

error: Content is protected !!