ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75ನೇ ವರ್ಷದ ಜನ್ಮದಿನ. ದೇಶಾದ್ಯಂತ ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷದಂತೆ ಈ ಸಲವೂ ಅಹಮದಾಬಾದ್ನಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಬಿಜೆಪಿ ನಾಯಕ ರೌಫ್ ಬಂಗಾಳಿ ಅವರು ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಥೀಮ್ ಆಧರಿಸಿ 75 ಕಿಲೋಗ್ರಾಂ ತೂಕದ ಕೇಕ್ ತಯಾರಿಸಿದ್ದರು. ಜಮಾಲ್ಪುರ್ ದರ್ವಾಜಾದಲ್ಲಿರುವ ಜಗನ್ನಾಥ ದೇವಾಲಯದ ಮಹಂತ್ ದಿಲೀಪ್ ದಾಸ್ಜಿ ಮಹಾರಾಜ್ ಮತ್ತು ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು 75 ಕಿಲೋಗ್ರಾಂ ತೂಕದ ಕೇಕ್ ಕತ್ತರಿಸಿ ಮೋದಿ ಅವರ ಹುಟ್ಟುಹಬ್ಬವನ್ನು ಆಚರಿಸಿದರು.