Thursday, September 18, 2025

ಶ್ರೀನಗರ-ಜಮ್ಮು ಹೆದ್ದಾರಿ ಸಂಚಾರ ಪುನಾರಂಭ : ಅಂತೂ ಹೊರಟವು ಸೇಬಿನ ಟ್ರಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ ಸಂಚಾರ ರದ್ದಾಗಿದ್ದ ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಆರಂಭಿಸಲಾಗಿದೆ.

ಕಳೆದ ಮೂರು ವಾರಗಳಿಂದ (22 ದಿನ) ರಸ್ತೆಯಲ್ಲಿ ನಿಂತಿದ್ದ ಸೇಬು ತುಂಬಿ ಟ್ರಕ್​​ಗಳು ಜಮ್ಮುವಿಗೆ ಪ್ರಯಾಣ ಪುನಾರಂಭಿಸಿವೆ ಎಂದು ಅಲ್ಲಿನ ಸಂಚಾರ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಭೂಕುಸಿತಕ್ಕೀಡಾಗಿದ್ದ ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್​ಗಳ ಸಂಚಾರಕ್ಕೆ ಅನುಮತಿ ನೀಡುವ ಕುರಿತು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್​ ಗಡ್ಕರಿ ಮತ್ತು ಸಿಎಂ ಒಮರ್​ ಅಬ್ದುಲ್ಲಾ ಅವರು ಮಾತುಕತೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಖಾಜಿಗುಂಡ್ ಟೋಲ್ ಪ್ಲಾಜಾದಿಂದ ಜಮ್ಮು ಕಡೆಗೆ ಲಘು ವಾಹನಗಳ ಸಂಚಾರಕ್ಕೆ ಪೊಲೀಸರು ಇಂದು ಬೆಳಗ್ಗೆ ಅನುಮತಿ ನೀಡಿದ್ದಾರೆ. ಕಳೆದ ಮೂರು ವಾರಗಳಿಂದ 6 ಸಾವಿರಕ್ಕೂ ಹೆಚ್ಚು ವಾಹನಗಳು, ಅದರಲ್ಲೂ ಹೆಚ್ಚಿನವು ಸೇಬು ತುಂಬಿದ ಟ್ರಕ್‌ಗಳು ಕಾಶ್ಮೀರ ಭಾಗದಲ್ಲಿ ಸಿಲುಕಿಕೊಂಡಿದ್ದವು. ಇಂದು ಬೆಳಗ್ಗೆ 11.30 ಕ್ಕೆ ಟ್ರಕ್‌ಗಳನ್ನು ಜಮ್ಮು ಕಡೆಗೆ ಸಂಚರಿಸಲು ಅನುಮತಿಸಲಾಯಿತು.

ಇದನ್ನೂ ಓದಿ