Saturday, August 30, 2025

ಹುಟ್ಟು ಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್ ನಟ ವಿಶಾಲ್

ತಮಿಳು ಸ್ಟಾರ್ ನಟ ವಿಶಾಲ್ ಅವರ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ನಟ ವಿಶಾಲ್​ ಅವರ ಹುಟ್ಟು ಹಬ್ಬ. ಮತ್ತೊಂದು ಹುಟ್ಟು ಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ನಟ ವಿಶಾಲ್, ನಟಿ ಸಾಯಿ ಧನ್ಶಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಈ ಬಗ್ಗೆ ವಿಶಾಲ್ ಅವರು ಬಹಿರಂಗ ಘೋಷಣೆ ಮಾಡಿದ್ದರು. ಸಾಯಿ ಧನ್ಶಿಕಾ ಸಹ ತಮಿಳು ಚಿತ್ರರಂಗದ ನಟಿ. ಈ ಹಿಂದೆ ಕಬಾಲಿ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಶಾಲ್ ಹಾಗೂ ಸಾಯಿ ಧನ್ಶಿಕಾ ಅವರ ನಿಶ್ಚಿತಾರ್ಥವು ವಿಶಾಲ್ ನಿವಾಸದಲ್ಲಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಇದೇ ವಿಚಾರವನ್ನು ವಿಶಾಲ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ