1 ತಿಂಗಳಲ್ಲಿ ಬೈಕ್ ಟ್ಯಾಕ್ಸಿಗೆ ನಿಯಮ ರೂಪಿಸುವ ಕುರಿತು ನಿಲುವು ತಿಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್;

1 ತಿಂಗಳಲ್ಲಿ ಬೈಕ್ ಟ್ಯಾಕ್ಸಿಗೆ ನಿಯಮ ರೂಪಿಸುವ ಬಗ್ಗೆ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಇಂದು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಪ್ರಶ್ನಿಸಿ ಆಪರೇಟರ್ ಗಳು ಸಲ್ಲಿಸಲಾಗಿದ್ದ ಮೇಲ್ಮನವಿಯ ಅರ್ಜಿಯ ವಿಚಾರಣೆಯನ್ನು ನಡೆಸಿದ ಸಿಜೆ ವಿಭು ಬಕ್ರು, ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ನ್ಯಾಯಪೀಠವು, ಎಲ್ಲರಿಗೂ ನ್ಯಾಯಯುತ ವ್ಯವಹಾರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಬೈಕ್ ಟ್ಯಾಕ್ಸಿ ನಡೆಸುತ್ತೇವೆಂದರೆ ಸರ್ಕಾರ ನಿಯಮ ರೂಪಿಸಬಹುದು. 13 ರಾಜ್ಯಗಳು ನಿಯಮ ರೂಪಿಸಿವೆ. ನೀವು ನಿಷೇಧಿಸಿದ್ದೀರಿ. ಈ ರೀತಿ ನಿಷೇಧ ಸರಿಯೇ ಎಂಬುದನ್ನು ಹೈಕೋರ್ಟ್ ಪರಿಶೀಲಿಸಿದೆ ಎಂದಿತು.

ಬೈಕ್ ನಿಂದ ಸಂಚಾರದಟ್ಟಣೆಯೂ ಉಂಟಾಗುವುದಿಲ್ಲ. ಕಾರು, ಆಟೋ ಸಂಚರಿಸದ ಕಡೆಯೂ ಬೈಕ್ ಸಂಚರಿಸಬಹುದು. ಸರ್ಕಾರ ನೀತಿ ರೂಪಿಸುವುದಿದ್ದರೇ ಸಮಯ ನೀಡುತ್ತೇವೆ. ಜೀವನೋಪಾಯದ ಅಂಶವೂ ಇರುವುದರಿಂದ ನಿಲುವು ತಿಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಹೈಕೋರ್ಟ್ ಸಲಹೆಗೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, ನಾಲ್ಕು ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆಂದರು. ಸೆಪ್ಟೆಂಬರ್.22ರ ಒಳಗೆ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!