ಕಿತ್ತೂರು ಉತ್ಸವದ ಹೊಸ್ತಿಲಲ್ಲೇ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿ: ದುರಸ್ತಿಗೆ ಅಧಿಕಾರಿಗಳ ಕ್ರಮ

ಹೊಸದಿಗಂತ ವರದಿ ಬೆಳಗಾವಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಪ್ರತಿಮೆಯ ಖಡ್ಗ ಹಿಡಿದ ಬಲಗೈ ಮುರಿದು ಬಿದ್ದಿದ್ದು, ಪ್ರತಿಮೆಗೆ ಹಾನಿಯಾಗಿದೆ. ಕಿತ್ತೂರು ಉತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಐತಿಹಾಸಿಕ ಮಹತ್ವ ಹೊಂದಿರುವ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿಯಾಗಿರುವುದು ಸಾರ್ವಜನಿಕರಲ್ಲಿ ವಿಷಾದ ಮೂಡಿಸಿದೆ. ಸುಮಾರು 25 ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಈ ಪ್ರತಿಮೆ ನಿರಂತರ ಬಿಸಿಲು ಹಾಗೂ ಮಳೆಯಿಂದ ದುರ್ಬಲಗೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಪ್ರತಿಮೆಯ ಕೈ ಮುರಿದು ಬೀಳಲು ನಿಖರ … Continue reading ಕಿತ್ತೂರು ಉತ್ಸವದ ಹೊಸ್ತಿಲಲ್ಲೇ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿ: ದುರಸ್ತಿಗೆ ಅಧಿಕಾರಿಗಳ ಕ್ರಮ