ಜಡಿಮಳೆಗೆ ತತ್ತರಿಸಿದ ಸುಬ್ರಹ್ಮಣ್ಯ ಪರಿಸರ: ಸಂಪರ್ಕ ಕಡಿತ ಭೀತಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಘಟ್ಟದ ತಪ್ಪಲು ಭಾಗದಲ್ಲಿಯೂ ಕಳೆದ 24 ತಾಸುಗಳ ಅವಧಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕುಮಾರಧಾರಾ ನದಿಯಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ. ಉಕ್ಕಿ ಹರಿಯುತ್ತಿರುವ ನದಿ ಹಾಗೂ ನಿರಂತರ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬದಿ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಭಾರೀ ಮಣ್ಣಿನ ಸವೆತ ಉಂಟಾಗಿದ್ದು, ಈ ಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕುಮಾರಧಾರ ನದಿಯ ಉಪನದಿ ದರ್ಪಣತೀರ್ಥಕ್ಕೆ ನೂತನ ಸೇತುವೆ ನಿರ್ಮಾಣವಾಗಿದೆ.ಈ ಹಿಂದೆ ಸೇತುವೆಯಿಂದ … Continue reading ಜಡಿಮಳೆಗೆ ತತ್ತರಿಸಿದ ಸುಬ್ರಹ್ಮಣ್ಯ ಪರಿಸರ: ಸಂಪರ್ಕ ಕಡಿತ ಭೀತಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ