Sunday, September 21, 2025

ಕಬಡ್ಡಿ ಪಂದ್ಯಾವಳಿ ವೇಳೆ ಹಠಾತ್ ಬಿರುಗಾಳಿ: ವಿದ್ಯುತ್ ತಂತಿ ತಗುಲಿ ಮೂವರು ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚತ್ತೀಸ್‌ಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಬಿರುಗಾಳಿ ಬೀಸಿದ ಪರಿಣಾಮ ಟೆಂಟ್‌ಗೆ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಈ ದುರ್ಘಟನೆ ನಲ್ಲಿ ಕಬ್ಬಡಿ ಆಟಗಾರ ಸತೀಶ್ ನೇತಮ್, ಹಾಗೂ ಸ್ಥಳೀಯ ನಿವಾಸಿಗಳಾದ ಶ್ಯಾಮ್‌ಲಾಲ್ ನೇತಮ್ ಮತ್ತು ಸುನಿಲ್ ಶೋರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ರಾವಸ್ವಾಹಿ ಗ್ರಾಮದ ಬಡೇರಾಜ್‌ಪುರ ಅಭಿವೃದ್ಧಿ ಬ್ಲಾಕ್‌ನಲ್ಲಿನ ಕಬ್ಬಡಿ ಪಂದ್ಯಕೇಂದ್ರದಲ್ಲಿ ನಡೆದಿತ್ತು. ಪಂದ್ಯಕ್ಕೆ ವಿಶೇಷವಾಗಿ ಪ್ರೇಕ್ಷಕರಿಗಾಗಿ ಟೆಂಟ್ ನಿರ್ಮಿಸಲಾಗಿತ್ತು. ಆ ವೇಳೆ ಹಠಾತ್ ಬಿರುಗಾಳಿ ಬೀಸಿದ ಪರಿಣಾಮ, ಟೆಂಟ್‌ನ ಕಬ್ಬಿಣದ ಕಂಬಕ್ಕೆ 11-ಕೆವಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ದುರ್ಘಟನೆ ಸಂಭವಿಸಿತು. ಸ್ಥಳೀಯರು ತಕ್ಷಣವೇ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ಹತ್ತಿರದ ವಿಶ್ರಾಂಪುರಿಯ ಆಸ್ಪತ್ರೆಗೆ ಕರೆದೊಯ್ದರು. ಗಾಯಗೊಂಡ ಆರು ಮಂದಿಯಲ್ಲಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ