ಐಪಿಎಲ್ ಪಂದ್ಯಗಳ ಬಗ್ಗೆ ಗವಾಸ್ಕರ್ ಅಸಮಾಧಾನ: ನಿಯಮ ಬದಲಿಸಲು BCCIಗೆ ಪತ್ರ ಬರೆದ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುನಿಲ್ ಗವಾಸ್ಕರ್ ಐಪಿಎಲ್ ಪಂದ್ಯಗಳು ನಿಗದಿತ ಸಮಯ ಮೀರಿ ಸಾಗುತ್ತಿರುವ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯಾವಳಿಯ ವೇಗ ಮತ್ತು ಶಿಸ್ತನ್ನು ಕಾಪಾಡಲು BCCIಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಆಟಗಾರರು ಹಾಗೂ ತಂಡಗಳಿಗೆ ನೀಡಿರುವ ಸೌಲಭ್ಯಗಳನ್ನು ಅತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಗವಾಸ್ಕರ್, ತಂತ್ರಗಾರಿಕೆಯ ವಿರಾಮದ ವೇಳೆ ಮೈದಾನಕ್ಕೆ ಅನಗತ್ಯವಾಗಿ ಹೆಚ್ಚು ಸಿಬ್ಬಂದಿ ಪ್ರವೇಶಿಸುವುದಕ್ಕೆ ಮಿತಿ ಇರಬೇಕು ಎಂದಿದ್ದಾರೆ. ಪಾನೀಯ ನೀಡಲು ಇಬ್ಬರು ಆಟಗಾರರು ಮತ್ತು ಅಗತ್ಯವಿರುವಷ್ಟು ತರಬೇತುದಾರರಿಗೆ ಮಾತ್ರ ಅವಕಾಶ ನೀಡುವಂತೆ … Continue reading ಐಪಿಎಲ್ ಪಂದ್ಯಗಳ ಬಗ್ಗೆ ಗವಾಸ್ಕರ್ ಅಸಮಾಧಾನ: ನಿಯಮ ಬದಲಿಸಲು BCCIಗೆ ಪತ್ರ ಬರೆದ ಮಾಜಿ ಕ್ರಿಕೆಟಿಗ