Friday, September 12, 2025

ಲೆಟರ್ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಸ್ವೀಟಿ! ಅಂಥದ್ದೇನಿದೆ ಆ ಪತ್ರದಲ್ಲಿ?

ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ತಾತ್ಕಾಲಿಕವಾಗಿ ದೂರವಾಗುವ ನಿರ್ಧಾರವನ್ನು ಘೋಷಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಹ್ಯಾಂಡ್‍ರೈಟ್ ಲೆಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ ಇತರ ಹಲವಾರು ನಟಿಯರಿಗಿಂತ ಭಿನ್ನವಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ. ಸಾಮಾನ್ಯವಾಗಿ ಅವರು ತಮ್ಮ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಂಬಂಧಪಟ್ಟ ಮಾಹಿತಿಯನ್ನಷ್ಟೇ ಹಂಚಿಕೊಳ್ಳುತ್ತಿದ್ದರು. ವೈಯಕ್ತಿಕ ಪೋಸ್ಟ್‌ಗಳನ್ನು ಹಾಕುವುದು ಅತ್ಯಂತ ವಿರಳವಾಗಿತ್ತು.

ಈಗ ಅವರು “ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ಕಾಲ ದೂರ ಸರಿಯುತ್ತಿದ್ದೇನೆ. ಮೊಬೈಲ್ ಸ್ಕ್ರೋಲಿಂಗ್ ಹೊರತಾಗಿಯೂ ಜಗತ್ತಿನೊಂದಿಗೆ ಹೆಚ್ಚು ಸಂಪರ್ಕ ಸಾಧಿಸಬೇಕಾಗಿದೆ. ಶೀಘ್ರದಲ್ಲೇ ಮತ್ತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಹೆಚ್ಚು ಚುರುಕಾಗಿರಲಿಲ್ಲ. ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರಭಾಸ್ ಜೊತೆ ಮತ್ತೆ ಜೋಡಿ ಆಗುವ ಬಗ್ಗೆ ಸುದ್ದಿಗಳೂ ಕೇಳಿಬಂದಿದ್ದರೂ, ಯಾವ ಪ್ರಾಜೆಕ್ಟ್ ಕೂಡ ಅಧಿಕೃತವಾಗಿ ಘೋಷಣೆಗೊಂಡಿಲ್ಲ.

ಇದನ್ನೂ ಓದಿ