Sunday, December 7, 2025

ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾ ರೆಡಿ: 8 ಸ್ಟಾರ್ ಪ್ಲೇಯರ್ಸ್ ತಂಡದಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜಯ ಸಾಧಿಸಿರುವ ಭಾರತ ತಂಡ ಇದೀಗ ಟಿ20 ಕ್ರಿಕೆಟ್‌ನ ಹೊಸ ಸವಾಲಿಗೆ ಸಿದ್ಧವಾಗಿದೆ. ಡಿಸೆಂಬರ್ 9ರಿಂದ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕಟಕ್‌ನಲ್ಲಿ ನಡೆಯಲಿದ್ದು, ಬಳಿಕ ಮುಲ್ಲನ್‌ಪುರ್, ಧರ್ಮಶಾಲ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಈ ಸರಣಿಗಾಗಿ ಪ್ರಕಟಿಸಲಾದ 15 ಸದಸ್ಯರ ಟಿ20 ತಂಡದಲ್ಲಿ ಕೆಲ ಪ್ರಮುಖ ಆಟಗಾರರ ಹೆಸರು ಕಾಣಿಸಿಕೊಂಡಿಲ್ಲ ಎಂಬುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ಈ ಬಾರಿ ಪರಿಗಣಿಸಿಲ್ಲ. ಹಾಗೆಯೇ ಪ್ರಸಿದ್ಧ್ ಕೃಷ್ಣ ಹಾಗೂ ರಿಷಭ್ ಪಂತ್ ಕೂಡ ತಂಡದ ಭಾಗವಾಗಿಲ್ಲ. ಟಿ20 ವಿಶ್ವಕಪ್ 2024 ಬಳಿಕ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಸೂರ್ಯಕುಮಾರ್ ಯಾದವ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದು, ಶುಭ್‌ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ ಸೇರಿದಂತೆ ಯುವ ಹಾಗೂ ಅನುಭವಿಗಳ ಸಮನ್ವಯ ಈ ತಂಡದ ವಿಶೇಷವಾಗಿದೆ.

ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ಮುಂತಾದ ಬೌಲಿಂಗ್ ಪಡೆ ತಂಡಕ್ಕೆ ಬಲ ನೀಡಲಿದೆ. ಹೊಸ ಮುಖಗಳೊಂದಿಗೆ ಭಾರತ ತಂಡ ಈ ಸರಣಿಯಲ್ಲಿ ಹೇಗೆ ಪ್ರದರ್ಶಿಸಲಿದೆ ಎಂಬುದರತ್ತ ಅಭಿಮಾನಿಗಳು ಕಾತರದ ಕಣ್ಣಿಟ್ಟಿದ್ದಾರೆ.

error: Content is protected !!