ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಲ್ಲಿ ತೆರೆ ಬಂದ ಸೂಪರ್ ಹಿಟ್ ಸಿನಿಮಾ ಅಂದರೆ ‘ಸು ಫ್ರಮ್ ಸೋ’. ರಾಜ್ ಬಿ ಶೆಟ್ಟಿ ಹಾಗೂ ಜೆಪಿ ತುಮ್ಮಿನಾಡು ಜೋಡಿಯ ಸು ಪ್ರಮ್ ಸೋ ಇಡೀ ಭಾರತದ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಈ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಈ ಖುಷಿಯಲ್ಲಿ ರಾಜ್ ಬಿ ಶೆಟ್ಟಿ ಮತ್ತು ಕಾರ್ಯಕಾರಿ ನಿರ್ಮಾಪಕರಾದ ಬಾಲು ಕುಮಟ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಸು ಫ್ರಮ್ ಸೋ ನೋಡಿ ಕೊಂಡಾಡಿದ ಅಕ್ಷಯ್ ಕುಮಾರ್, ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ ಅಂತ ರಾಜ್ ಬಿ ಶೆಟ್ಟಿ ಅವರನ್ನು ಕೇಳಿದ್ದಾರೆ ಎನ್ನಲಾಗಿದೆ.
ಸದ್ಯ ಅಕ್ಷಯ್ ಕುಮಾರ್ ಅವರು ಹೈವಾನ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಊಟಿಯಲ್ಲಿ ಚಿತ್ರೀಕರಣವಾಗ್ತಿರೋ ಹೈವಾನ್ ಚಿತ್ರವನ್ನ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸ್ತಿದ್ದು, ಪ್ರಿಯದರ್ಶನ್ ನಿರ್ದೇಶನ ಮಾಡ್ತಿದ್ದಾರೆ.