Sunday, January 11, 2026

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ 6 ಎಕರೆ ಕಬ್ಬು ಭಸ್ಮ!

ಹೊಸದಿಗಂತ ಬೀದರ್:

ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಾಸಿಮಾಡ ಗ್ರಾಮದಲ್ಲಿ ಬುಧವಾರ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಸುಮಾರು 6 ಎಕರೆ ಕಬ್ಬು ಬಲಿಯಾಗಿದೆ. ಗ್ರಾಮದ ಸರ್ವೇ ಸಂಖ್ಯೆ 89ರಲ್ಲಿ ಪ್ರಗತಿಪರ ರೈತ ಶಿವರಾಯ ಮುದಾಳೆ ಅವರು ಬೆಳೆದಿದ್ದ ಸುಮಾರು 200 ಟನ್ ಕಬ್ಬು ಬೆಂಕಿಯ ಜ್ವಾಲೆಗೆ ಸಂಪೂರ್ಣವಾಗಿ ಭಸ್ಮವಾಗಿದೆ.

98 ವರ್ಷದ ಇಳಿವಯಸ್ಸಿನಲ್ಲೂ ಮಣ್ಣನ್ನೇ ನಂಬಿ ದುಡಿದಿದ್ದ ಶಿವರಾಯ ಅವರ ಶ್ರಮವೆಲ್ಲಾ ಕ್ಷಣಾರ್ಧದಲ್ಲಿ ಬೂದಿಯಾಗಿದೆ. ಅಂದಾಜು 6 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಅಗ್ನಿಶಾಮಕ ದಳವು ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ ಕಾರಣ ಪಕ್ಕದ ಹೊಲಗಳಿಗೆ ಹಾನಿಯಾಗುವುದು ತಪ್ಪಿದೆ. “ನನ್ನ ಇಡೀ ವರ್ಷದ ಶ್ರಮ ಆಹುತಿಯಾಗಿದೆ, ಸರ್ಕಾರ ತಕ್ಷಣ ನನಗೆ ಆಸರೆಯಾಗಬೇಕು” ಎಂದು ನೊಂದ ರೈತ ಅಳಲು ತೋಡಿಕೊಂಡಿದ್ದಾರೆ.

ರೈತನ ಆರು ಎಕರೆ ಕಬ್ಬು ಭಸ್ಮ ಮಾಸಿಮಾಡ ಗ್ರಾಮದ ಹಿರಿಯ ರೈತ ಶಿವರಾಯ ಮುದಾಳೆ ಅವರಿಗೆ ಸೇರಿದ ಆರು ಎಕರೆ ಕಬ್ಬಿನ ತೋಟ ಬುಧವಾರ ಸಂಜೆ ಶಾರ್ಟ್ ಸರ್ಕಿಟ್‌ನಿಂದಾಗಿ ಸುಟ್ಟು ಕರಕಲಾಗಿದೆ. ಸುಮಾರು 200 ಟನ್ ಇಳುವರಿ ನಿರೀಕ್ಷೆಯಲ್ಲಿದ್ದ ರೈತನಿಗೆ ಈಗ 6 ಲಕ್ಷ ರೂಪಾಯಿಯ ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ತಾನು ಬೆವರು ಸುರಿಸಿ ಸಾಕಿ ಸಲಹಿದ್ದ ಬೆಳೆ ನಾಶವಾಗಿರುವುದರಿಂದ ಶಿವರಾಯ ಅವರು ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

error: Content is protected !!