ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಮತ್ತು ಮಳೆ ನೀರು ಸಂಗ್ರಹಣೆ ಕಾರ್ಯಗಳಲ್ಲಿ ಯಶಸ್ವಿ ಅನುಷ್ಠಾನ ಮಾಡಿದ ಕೋಲಾರ ಜಿಲ್ಲೆಗೆ ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆ ನೀಡುವ ಜಲ ಸಂಚಯನ್ ಜಲ್ ಭಾಗೀಧಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು 25 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಮತ್ತು ನರೇಗಾ ಯೋಜನೆಯಡಿ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ಅಭಿವೃದ್ಧಿ, ಕೃಷಿಗೆ ಅಗತ್ಯ ನೀರಿನ ಒದಗಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಉದ್ದೇಶದೊಂದಿಗೆ ಕೈಗೊಂಡ ಯೋಜನೆಯಲ್ಲಿ ಕೋಲಾರ ಜಿಲ್ಲೆ ಮುಂಚೂಣಿಯಲ್ಲಿದೆ.
ಕೋಲಾರ ಜಿಲ್ಲೆಯ ಮುಕುಟಕ್ಕೆ ಕೇಂದ್ರ ಸರ್ಕಾರದ ಜಲ ಸಂಚಯನ್ ಜಲ್ ಭಾಗೀಧಾರಿ ರಾಷ್ಟ್ರೀಯ ಪ್ರಶಸ್ತಿಯ ಮಣಿ!
