ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೂವಿನ ಬಾಣದಂತೆ, ಯಾರಿಗೂ ಸಾಲದಂತೆ ಹಾಡನ್ನು ಅವರದ್ದೇ ಶೈಲಿಯಲ್ಲಿ ಹಾಡಿ ಟ್ರೋಲ್ ಆಗಿದ್ದ ಯುವತಿಗೆ ಇದೀಗ ಸಿನಿಮಾ ಆಫರ್ ಬಂದಿದೆಯಂತೆ!
ನಿತ್ಯಶ್ರೀ ಹಾಡಿದ್ದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಜನ ಆಕೆಯ ಹಾಡನ್ನು ಆಡಿಕೊಳ್ಳುತ್ತಲೇ ಶೇರ್, ಲೈಕ್ ಮಾಡಿದ್ದರು. ಇದಾದ ನಂತರ ಸಾಕಷ್ಟು ಮಂದಿ ಆಕೆಯ ಹಾಡು ಕೇಳೋಕೆ, ಫೋಟೊ ತೆಗೆದುಕೊಳ್ಳೋಕೆ ಹಿಂದೆಬಿದ್ದಿದ್ದರು.
ಕೆ.ಆರ್ ಪೇಟೆ ಯುವತಿ ನಿತ್ಯಾಶ್ರೀ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್‌ಸ್ಟಾದಲ್ಲಿ ನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ. ಸಿನಿಮಾ ಆಫರ್ ಬಂದಿದೆ. ಈ ಬಗ್ಗೆ ಏನು ಮಾಡಬೇಕು ಎಂದು ಯೋಚಿಸಿಲ್ಲ ಎಂದು ನಿತ್ಯಶ್ರೀ ಹೇಳಿಕೊಂಡಿದ್ದಾರೆ.
VIRAL | ಹೂವಿನ ಬಾಣದಂತೆ ಎಂದು ಹಾಡಿ ವೈರಲ್ ಆಗಿದ್ದ ಹುಡುಗಿಗೆ ಸಿನಿಮಾ ಆಫರ್ ಬಂದಿದ್ಯಂತೆ!
