Monday, January 12, 2026

ವಿಮಾನ ನಿಲ್ದಾಣಗಳಲ್ಲಿ ಕಳ್ಳತನ: ಬೆಂಗಳೂರಿಗೆ ದೇಶದಲ್ಲೇ ಫಸ್ಟ್‌ ಪ್ಲೇಸ್!

ಕಳ್ಳತನ ಕೇಸ್​​ಗಳ ವಿಚಾರವಾಗಿ ನಮ್ಮ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ ಮತ್ತೆ ಸದ್ದು ಮಾಡಿದೆ. ಈ ವರ್ಷ ಭಾರತದಲ್ಲಿನ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಪ್ರಕ್ರಿಯೆಯ ವೇಳೆ 9 ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ ನಾಲ್ಕು ಪ್ರಕರಣಗಳು ಕೆಐಎಬಿಯಲ್ಲೇ ನಡೆದಿವೆ. ಈ ಮೂಲಕ ಬೆಂಗಳೂರು ಏರ್​​ಪೋರ್ಟ್​​ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

ಜನವರಿ 1ರಿಂದ ನವೆಂಬರ್ 27ರವರೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ನಡೆದಿದ್ದು, ದೆಹಲಿ, ಹೈದರಾಬಾದ್, ಮುಂಬೈ, ನಾಗಪೂರ್ ಮತ್ತು ರಾಜ್ಕೋಟ್ ವಿಮಾನ ನಿಲ್ದಾಣಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ ಮೊಹೊಲ್ ಲೋಕಸಭೆಗೆ ತಿಳಿಸಿದ್ದಾರೆ. ಕಾಂಗ್ರೆಸ್ ಸಂಸದ ಗುರುಜೀತ್ ಸಿಂಗ್ ಔಜ್ಲಾ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ಇಂತಹ ಘಟನೆಗಳು ಗಮನಕ್ಕೆ ಬಂದ ತಕ್ಷಣ ದೂರುಗಳು ದಾಖಲಾಗುತ್ತಿವೆ. ಸ್ಥಳೀಯ ಪೊಲೀಸರು ಮುಂದಿನ ಕ್ರಮವನ್ನುಕೈಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡದ ಎಲ್ಲಾ ಪ್ರದೇಶಗಳು ಸಿಸಿಟಿವಿ ಕಣ್ಗಾವಲಿನಲ್ಲಿ ಇರಬೇಕು ಎಂದು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಕಡ್ಡಾಯ ಮಾಡಿದೆ. ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಲು CISF ಮತ್ತು ಏರ್‍ಲೈನ್ ಭದ್ರತಾ ಸಿಬ್ಬಂದಿಗಳ ನಡುವೆ ನಿಕಟ ಸಹಕಾರ ಇದೆ. ಆ ಮೂಲಕ ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಘಟನೆಗಳನ್ನು ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೊಹೊಲ್ ಹೇಳಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!