Wednesday, October 15, 2025

ಸಮೀಕ್ಷೆಯಿಂದ ಜಾತಿ, ಧರ್ಮಕ್ಕೆ ತೊಂದರೆ ಕೊಡುವ ಉದ್ದೇಶವಿಲ್ಲ: ಎನ್‌.ಎಸ್‌. ಭೋಸರಾಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಯಾವುದೇ ಜಾತಿ ಅಥವಾ ಧರ್ಮಕ್ಕೆ ತೊಂದರೆ ಕೊಡುವ ಉದ್ದೇಶವಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯ ಮುಖ್ಯ ಉದ್ದೇಶ ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಯನ್ನು ಅರಿತು, ಸಮುದಾಯಗಳಿಗೆ ಸೂಕ್ತ ಅಭಿವೃದ್ಧಿ ಯೋಜನೆ ರೂಪಿಸಲು ಸಹಾಯ ಮಾಡುವುದು. ಸಮೀಕ್ಷೆಯಲ್ಲಿ 1.75 ಲಕ್ಷ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರ ಮನಸ್ಸಿಗೆ ಬಿಟ್ಟಿರುವ ವಿಚಾರವನ್ನು ಮಾತ್ರ ದಾಖಲಾಗುತ್ತದೆ, ಎಂದ ಹೇಳಿದರು.

ಸಂತೋಷಕರ ಸಂಗತಿ ಏನೆಂದರೆ, ಸಮೀಕ್ಷೆಯಲ್ಲಿ ಜಾತಿ ಅಥವಾ ಧರ್ಮ ಸಂಬಂಧಿತ ಪ್ರಶ್ನೆ ಬಲವಂತವಾಗಿ ಹಾಕಲಾಗುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಸಲಹೆ ಮೇರೆಗೆ ‘ಕ್ರಿಶ್ಚಿಯನ್’ ಪದ ಸೇರಿಸಲಾಗಿದ್ದು, ಜನರ ಮನಸ್ಸಿನ ಅನುಮತಿಯನ್ನು ಪಡೆದ ಮೇಲೆ ಮಾತ್ರ ದಾಖಲಾಗಿದೆ. ಯಾವುದೇ ವ್ಯಕ್ತಿಯ ಮೇಲೆ ಬಲಾತ್ಕಾರ ಅಥವಾ ದ್ವೇಷ ಉಂಟಾಗಲು ಸರ್ಕಾರ ಉದ್ದೇಶಿಸಲಿಲ್ಲ. ಬಿಜೆಪಿಯವರು ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರು ಈಗ ಬುದ್ಧಿವಂತರು, ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡುತ್ತಾರೆ ಎಂದ ಭೋಸರಾಜು ಹೇಳಿದರು.

error: Content is protected !!