Wednesday, September 3, 2025

ತನಿಖೆ ಹಂತದಲ್ಲಿರುವ ಧರ್ಮಸ್ಥಳ ಪ್ರಕರಣ ಎನ್‌ಐಎಗೆ ಒಪ್ಪಿಸುವ ಮಾತೇ ಇಲ್ಲ: ಪರಂ ಸ್ಪಷ್ಟೋಕ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಽಸಿ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖಾ ತಂಡದ ಮೇಲೆ ವಿಶ್ವಾಸವಿದೆ. ಎಸ್‌ಐಟಿ ಇನ್ನೂ ತನ್ನ ತನಿಖೆಯನ್ನೇ ಮುಗಿಸಿಲ್ಲ. ಅದಕ್ಕೂ ಮುನ್ನ ಈ ಆತುರ ಏಕೆ? ತನಿಖೆ ಮುಗಿದು ವರದಿ ಬರೋವರೆಗೂ ಬೇರೆ ಯಾವುದೇ ತನಿಖಾ ಸಂಸ್ಥೆಗಳಿಗೆ ವಹಿಸುವ ಇರಾದೆ ಇಲ್ಲ ಎಂದು ಅವರು ಹೇಳಿದರು.

ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಪಡಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಮಾಡುತ್ತಿರುವುದನ್ನು ನೋಡಿದರೆ ಹೌದು ಅನ್ನಿಸುತ್ತಿದೆ. ಬಿಜೆಪಿ ಪದೇ ಪದೇ ಎಸ್‌ಐಟಿ ತನಿಖೆಗೆ ವಿರೋಧ ಮಾಡುತ್ತಿದೆ. ತನಿಖೆಯ ಹಂತದಲ್ಲಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ಎನ್‌ಐಎ ತನಿಖೆಗೆ ನೀಡುವುದಿಲ್ಲ. ಈಗ ಅದರ ಅಗತ್ಯವೂ ಇಲ್ಲ ಎಂದು ಅವರು ಮತ್ತೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ